ಬಳ್ಳಾರಿ: ಅಕ್ಟೋಬರ್ 28ರಂದು ನಡೆಯಲಿರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರನ್ನು ಗೆಲ್ಲಿಸಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ ಮತ್ತು ಅಲ್ಲಂ ವೀರಭದ್ರಪ್ಪ ಮನವಿ ಮಾಡಿಕೊಂಡಿದ್ದಾರೆ.
ಬಳ್ಳಾರಿಯ ಬಾಲಾ ರಿಜೆನ್ಸಿ ಹೋಟೆಲ್ನಲ್ಲಿಂದು ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆ.ಸಿ.ಕೊಂಡಯ್ಯ, ಕಳೆದ ಆರು ವರ್ಷದ ಅವಧಿಯಲ್ಲಿ ಶರಣಪ್ಪ ಮಟ್ಟೂರ ಅವರು ಶಿಕ್ಷಕರ ನಲಿವು-ನೋವಿಗೆ ಸದಾ ಸ್ಪಂದಿಸಿದ್ದಾರೆ. ಅತಿಥಿ ಶಿಕ್ಷಕರ ವೇತನ ತಾರತಮ್ಯ ನೀತಿ ಹಾಗೂ ವೇತನ ಪಾವತಿ ವಿಳಂಬ ಸೇರಿದಂತೆ ಇತರೆ ಸಮಸ್ಯೆಗಳಿಗೆ ಶರಣಪ್ಪ ಮಟ್ಟೂರ ಸ್ಪಂದಿಸಿದ್ದು, ಶೇ. 60ರಷ್ಟು ಸಮಸ್ಯೆಗಳಿಗೆ ಸೂಕ್ತ ನ್ಯಾಯ ದೊರಕಿಸಿಕೊಟ್ಟಿದ್ದಾರೆಂದು ತಿಳಿಸಿದರು.