ಬಳ್ಳಾರಿ:ಹಿಂದಿನ ಸರ್ಕಾರದ ಅವಧಿಯಲ್ಲಿ ಕಳ್ಳರು, ಸುಳ್ಳರು ಇದ್ದರೂ ಕೂಡ ಅವರು ಸತ್ಯಹರಿಶ್ವಂದ್ರರೆಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಈಗ ಮುಖ್ಯಮಂತ್ರಿಯವರು ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವುದರಿಂದ ಅಂತವರಿಗೆ ತಕ್ಕಶಾಸ್ತಿ ಆಗಲಿದೆ ಎಂದು ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯ ಹವಂಬಾವಿ ಬಳಿಯ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಮಾಡಿಯೇ ತಾವು ಸತ್ಯ ಹರಿಶ್ವಂದ್ರರಂತೆ ನಟಿಸುವವರಿದ್ದು, ಈ ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ. ಸಿಎಂ ಯಡಿಯೂರಪ್ಪನರ ನಿರ್ಧಾರವನ್ನು ನಾನು ವೈಯಕ್ತಿಕವಾಗಿ ಸ್ವಾಗತಿಸುವೆ. ಈ ರೀತಿಯ ಫೋನ್ ಕದ್ದಾಲಿಕೆ ಯಾರೂ ಮಾಡಬಾರದು, ಅದು ತಪ್ಪು. ಕೆಲ ಅಧಿಕಾರಿಗಳೂ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಫೋನ್ ಕದ್ದಾಲಿಕೆ, ದುರುಪಯೋಗ ವಿಚಾರದಲ್ಲಿ ಅನೇಕ ಸರ್ಕಾರಗಳು ಬಿದ್ದುಹೋಗಿವೆ. ನನ್ನ ಫೋನ್ ಕದ್ದಾಲಿಕೆಯಾಗಿದೆ ಅಂತ ಸುದ್ದಿ ಹರದಾಡ್ತಿದೆ, ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.