ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮನಾಯ್ಕ ಅವರ ಪುತ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಶಾಸಕರ ಪುತ್ರನ ಕಾರು ಅಪಘಾತ: ಇಬ್ಬರಿಗೆ ಗಾಯ - ಟಾಟಾ ಏಸ್ಗೆ ಡಿಕ್ಕಿ
ಶಾಸಕ ಭೀಮನಾಯ್ಕ ಅವರ ಪುತ್ರ ಅಶೋಕ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿದೆ. ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.
ಕಾರು ಅಪಘಾತ
ಭೀಮಾನಾಯ್ಕ ಅವರ ಪುತ್ರ ಅಶೋಕ್ (21), ಮರಿಯಮ್ಮನಹಳ್ಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50ರ ಎಂಎಸ್‌ಪಿಎಲ್ ಕ್ರಾಸ್‌ನ, ಫ್ಲೈಓವರ್‌ನಲ್ಲಿ ಹೊಸಪೇಟೆಯಿಂದ ಹಗರಿಬೊಮ್ಮನಹಳ್ಳಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆಅಶೋಕ್ ಪ್ರಯಾಣಿಸುತ್ತಿದ್ದ ಔಡಿ ಕಾರು ಎದುರಿನಿಂದ ಬಂದ ಟಾಟಾ ಏಸ್ಗೆ ಡಿಕ್ಕಿ ಹೊಡೆದಿದೆ.
ಈ ಘಟನೆಯಲ್ಲಿ ಅಶೋಕ್ಗೆ ಗಾಯಗಳಾಗಿದ್ದು, ಟಾಟಾ ಏಸ್‌ನಲ್ಲಿದ್ದವರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಶಾಸಕ ಭೀಮಾನಾಯ್ಕ ಹಾಗೂ ಮರಿಯಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.