ಬಳ್ಳಾರಿ:ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಇಂದು ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ ಅವರನ್ನು ಭೇಟಿ ಮಾಡಿದರು.
ಒಳಚರಂಡಿ ಯೋಜನೆ ಬಗ್ಗೆ ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿದ ಜಿ.ಸೋಮಶೇಖರ್ ರೆಡ್ಡಿ - ಬಳ್ಳಾರಿ ಲೇಟೆಸ್ಟ್ ನ್ಯೂಸ್
ಬಳ್ಳಾರಿ ನಗರದ ಒಳಚರಂಡಿ ಯೋಜನೆಗೆ ಬಜೆಟ್ನಲ್ಲಿ ಅಂದಾಜು 250 ಕೋಟಿ ರೂ. ಮೀಸಲಿಡುವುದಕ್ಕೆ ಸಂಬಂಧಿಸಿದಂತೆ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಭೈರತಿ ಬಸವರಾಜ ಅವರೊಂದಿಗೆ ಚರ್ಚಿಸಿದರು.
ಒಳಚರಂಡಿ ಯೋಜನೆ ಬಗ್ಗೆ ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿದ ಜಿ.ಸೋಮಶೇಖರ್ ರೆಡ್ಡಿ
ಬಳ್ಳಾರಿ ನಗರದ ಒಳಚರಂಡಿ ಯೋಜನೆಗೆ ಬಜೆಟ್ನಲ್ಲಿ ಅಂದಾಜು 250 ಕೋಟಿ ರೂ. ಮೀಸಲಿಡುವುದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿದರು. ಇದೇ ವೇಳೆ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ರಾಬಕೊ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ವೀರಶೇಖರ್ ರೆಡ್ಡಿ, ಎಪಿಎಂಸಿ ಸದಸ್ಯರಾದ ಕೃಷ್ಣರೆಡ್ಡಿ, ಮುಖಂಡರಾದ ಶ್ರೀನಿವಾಸ್ ಮೋತ್ಕರ್ ಇತರರು ಉಪಸ್ಥಿತರಿದ್ದರು.