ಬಳ್ಳಾರಿ:ಲೋಕಸಭಾ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪರವಾಗಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ನಗರದಲ್ಲಿಂದು ಮತಯಾಚನೆ ಮಾಡಿದರು. ಇಲ್ಲಿನ ಎಪಿಎಂಸಿ ಮಾರುಕಟ್ಟೆ, ದೊಡ್ಡ ತರಕಾರಿ ಮಾರುಕಟ್ಟೆ, ಬಳ್ಳಾರೆಪ್ಪ ಕಾಲೋನಿ ಸೇರಿದಂತೆ ಇತರೆಡೆ ಬಿಜೆಪಿಯ ಅಭ್ಯರ್ಥಿ ದೇವೇಂದ್ರಪ್ಪ ಅವರೊಂದಿಗೆ ತೆರಳಿ, ಕಮಲದ ಗುರುತಿಗೆ ತಮ್ಮ ಅಮೂಲ್ಯವಾದ ಮತಹಾಕಿ ಎಂದು ಮನವಿ ಮಾಡಿಕೊಂಡರು.
ಬಳ್ಳಾರಿ ಕೇಸರಿ ಪಡೆ ಪ್ರಚಾರ ಜೋರು... ಅಖಾಡಕ್ಕಿಳಿದ ಸೋಮಶೇಖರ ರೆಡ್ಡಿ - undefined
ಲೋಕಸಭಾ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪರವಾಗಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಮತಯಾಚನೆ ಮಾಡಿದರು.
![ಬಳ್ಳಾರಿ ಕೇಸರಿ ಪಡೆ ಪ್ರಚಾರ ಜೋರು... ಅಖಾಡಕ್ಕಿಳಿದ ಸೋಮಶೇಖರ ರೆಡ್ಡಿ](https://etvbharatimages.akamaized.net/etvbharat/images/768-512-2979817-thumbnail-3x2-somashekhar.jpg)
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದೇವೇಂದ್ರಪ್ಪ ಅವರಿಗೆ ಮತ ನೀಡಿ, ಜಯಶೀಲರನ್ನಾಗಿಸುವ ಮುಖೇನ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕು. ಇಡೀ ದೇಶ ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರತಿಯೊಬ್ಬರೂ ಬಿಜೆಪಿಗೆ ಮತ ನೀಡಿ. ದೇಶದ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೋರಿದರು.
ರಾಜ್ಯ ರೈತ ಮೋರ್ಚಾ ಘಟಕದ ಉಪಾಧ್ಯಕ್ಷ ಎಸ್.ಗುರು ಲಿಂಗನಗೌಡರು, ಪಾಲಿಕೆ ಸದಸ್ಯರಾದ ಎಸ್.ಮಲ್ಲನಗೌಡ, ಶ್ರೀನಿವಾಸ ಮೋತ್ಕರ, ಮುಖಂಡರಾದ ವೀರಶೇಖರರೆಡ್ಡಿ, ಕೃಷ್ಣಾರೆಡ್ಡಿ, ಶ್ರೀನಿವಾಸಲು, ರಾಮಾಂಜನೇಯಲು, ಬಾಲಕೃಷ್ಣ ಈರಣ್ಣ ಜಮನ್ನ ಫಯಾಜ್ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು.