ಕರ್ನಾಟಕ

karnataka

ETV Bharat / state

ಮಾದಿಗರು ತಮ್ಮ ಸಮುದಾಯದ ಅಶಕ್ತರಿಗಾಗಿ ತ್ಯಾಗಿಗಳಾಗಬೇಕು.. ಶಾಸಕ ಸೋಮಶೇಖರ ರೆಡ್ಡಿ

ಇಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಜಿಲ್ಲಾ ಮಾದಿಗ ನೌಕರರ ಹಾಗೂ ವಕೀಲರ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

MLA Somashekar reddy
ಶಾಸಕ ಸೋಮಶೇಖರ ರೆಡ್ಡಿ

By

Published : Dec 14, 2019, 8:16 PM IST

ಬಳ್ಳಾರಿ :ಮೀಸಲಾತಿ ಆಧಾರದ ಅಡಿಯಲ್ಲಿ ಐಎಎಸ್, ಕೆಎಎಸ್ ಅಧಿಕಾರಿಗಳಿಗೆ ಒಲಿದು ಬರುವ ದೊಡ್ಡ ದೊಡ್ಡ ಹುದ್ದೆಗಳನ್ನು ಮಾದಿಗ ಸಮುದಾಯದ ಕಡು ಬಡವರಿಗೆ ಬಿಟ್ಟುಕೊಡುವ ಮುಖೇನ ತ್ಯಾಗಿಗಳಾಗಬೇಕೆಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ಸಲಹೆ ನೀಡಿದರು.

ಶಾಸಕ ಸೋಮಶೇಖರ ರೆಡ್ಡಿ..

ನಗರದ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿಂದು ಜಿಲ್ಲಾ ಮಾದಿಗ ನೌಕರರ ಹಾಗೂ ವಕೀಲರ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾದಿಗ ಸಮುದಾಯದಲ್ಲಿ ಕಡು ಬಡವರಿದ್ದಾರೆ. ಆ ಸಮುದಾಯದಲ್ಲಿ ಉನ್ನತ ಹುದ್ದೆಗಳನ್ನೂ ಅಲಂಕರಿಸಿದ್ದಾರೆ. ಅವರು ತಮ್ಮ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಉನ್ನತ ಹುದ್ದೆಗಳನ್ನು ತ್ಯಾಗ ಮಾಡಬೇಕು.‌ ಆಗ ಮಾತ್ರ ಈ ಮಾದಿಗ ಸಮುದಾಯ ಶ್ರೇಯೋಭಿವೃದ್ಧಿಯಾಗುತ್ತದೆ ಎಂದರು.

ನಾನು ಈ ಹಿಂದೆ ಶಾಸಕನಾಗಿದ್ದ ವೇಳೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ಮಾದಿಗ ಸಮುದಾಯದವರೊಂದಿಗೆ ಕುಳಿತುಕೊಂಡು ಟೀ ಕುಡಿಯುತ್ತಿದ್ದೆ.‌ ಅನಾಮಧೇಯ ರಾಜಕಾರಣಿಯೊಬ್ಬರು ಅಲ್ಲಿಗೆ ಬಂದು ಮಾದಿಗ ಸಮುದಾಯದವರೊಂದಿಗೆ ಕುಳಿತಿರೋದನ್ನು ಕಂಡು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಲೇ ಮುನ್ನಡೆದರು.‌ ಅವತ್ತು ನಾನು ಈ ಸಮುದಾಯದವರೊಂದಿಗೆ ದುವರ್ತನೆ ತೋರಿದ್ದರೆ, ಇವತ್ತು ನಾನು ಶಾಸಕನಾಗಿ ಇರುತ್ತಿರಲಿಲ್ಲ.‌ ನಾನು ಎಲ್ಲಾ ಸಮುದಾಯದೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವವನು. ಹಾಗಾಗಿ ಈ ಸಮುದಾಯದ ಬಗ್ಗೆ ನನಗೆ ವಿಶೇಷ ಕಾಳಜಿಯಿದೆ ಎಂದರು.

ABOUT THE AUTHOR

...view details