ಬಳ್ಳಾರಿ:ಮುನ್ಸಿಪಲ್ ಮೈದಾನದ ತರಕಾರಿ ಮಾರುಕಟ್ಟೆಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ದಿಢೀರ್ ಭೇಟಿ ನೀಡಿ, ಗುಂಪು-ಗುಂಪಾಗಿ ನಿಂತಿದ್ದ ಜನರನ್ನ ಚದುರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ರು.
ಬಳ್ಳಾರಿ: ಮುನ್ಸಿಪಲ್ ಮೈದಾನದ ತಾತ್ಕಾಲಿಕ ತರಕಾರಿ ಮಾರುಕಟ್ಟೆಗೆ ಶಾಸಕರ ದಿಢೀರ್ ಭೇಟಿ - ballary latest news
ಕೊರೊನಾ ಎಫೆಕ್ಟ್ನಿಂದ ದೇಶವೇ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಗಣಿನಗರಿಯಲ್ಲಿ ತಾತ್ಕಾಲಿಕವಾಗಿ ಶಿಫ್ಟ್ ಮಾಡಲಾಗಿದ್ದ ಮುನ್ಸಿಪಲ್ ಮೈದಾನದ ತರಕಾರಿ ಮಾರುಕಟ್ಟೆಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ದಿಢೀರ್ ಭೇಟಿ ನೀಡಿದ್ದರು.
ಕೊರೊನಾ ವೈರಸ್ ಎಫೆಕ್ಟ್ನಿಂದ ದೇಶವೇ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಗಣಿನಗರಿಯಲ್ಲಿ ತಾತ್ಕಾಲಿಕವಾಗಿ ಶಿಫ್ಟ್ ಮಾಡಲಾಗಿದ್ದ ಮುನ್ಸಿಪಲ್ ಮೈದಾನದ ತರಕಾರಿ ಮಾರುಕಟ್ಟೆಗೆ ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ದಿಢೀರ್ ಭೇಟಿ ನೀಡಿ, ಲೆಕ್ಕಕ್ಕಿಂತ ಹೆಚ್ಚು ಜನ ಸೇರಿದ ವಾತಾವರಣ ಸರಿಪಡಿಸುವ ಕೆಲಸ ಮಾಡಿದರು.
ಮಾಸ್ಕ್ ಧರಿಸದೇ ಮಗುವನ್ನು ಕರೆ ತಂದ ವ್ಯಕ್ತಿಯೋರ್ವನಿಗೆ ಶಾಸಕರು ಸರಿಯಾಗಿ ಕ್ಲಾಸ್ ತೆಗೆದುಕೊಂಡ್ರು. ಮಂಗಳುರಿನಲ್ಲಿ 10 ತಿಂಗಳ ಮಗುವಿಗೂ ಕೊರೊನಾ ಬಂದಿದೆ. ಹಾಗಾಗಿ ಎಲ್ಲರೂ ಜಾಗರೂಕರಾಗಿರಬೇಕೆಂದು ತಿಳಿಹೇಳಿದ್ರು. ಇನ್ನು ಅಧಿಕಾರಿಗಳನ್ನು ಕರೆಸಿ ಮಾರ್ಕೆಟ್ನಿಂದ ಎಲ್ಲರನ್ನೂ ಹೊರ ಕಳಿಸುವ ಕೆಲಸ ಮಾಡಿದರು.