ಕರ್ನಾಟಕ

karnataka

ETV Bharat / state

ಸಹೋದರ ಬಳ್ಳಾರಿಗೆ ಬರಲು ಸುಪ್ರೀಂ ಅನುಮತಿ ಕೊಟ್ಟಿರೋದು ಸಂತಸ ತಂದಿದೆ: ಶಾಸಕ ಸೋಮಶೇಖರ ರೆಡ್ಡಿ - Mla Somasekhar Reddy speak about janardhana reddy in ballary

ಶ್ರಾವಣ ಮಾಸದ ಸಲುವಾಗಿ ಆತ ಬರುತ್ತಿದ್ದಾನೆ. ಕಾರ್ಯಕರ್ತರಲ್ಲಿ ತುಂಬಾ ಉತ್ಸಾಹ ತುಂಬಿದೆ. ಅವನಿಲ್ಲ ಅಂದ್ರೆ ನಮಗೆ ಕಷ್ಟ ಆಗುತ್ತೆ. ಬರುತ್ತಿದ್ದಾನೆ, ನೋಡೋಣ ಎಂದು ಶಾಸಕ ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.

mla-somasekhar-reddy
ಶಾಸಕ ಸೋಮಶೇಖರ ರೆಡ್ಡಿ

By

Published : Aug 19, 2021, 6:08 PM IST

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಹೋಗಲು ಕೊನೆಗೂ ಸುಪ್ರೀಂಕೋರ್ಟ್​ ಅನುಮತಿ ನೀಡಿದೆ. ಆದರೆ, ನ್ಯಾಯಾಲಯ ಕೆಲವು ಷರತ್ತುಗಳನ್ನು ವಿಧಿಸಿದೆ. ಇನ್ನು ಆಂಧ್ರಪ್ರದೇಶದ ಕಡಪ ಮತ್ತು ಅನಂತಪುರಕ್ಕೂ ಭೇಟಿ ನೀಡಲು ಸಹ​​ ಪರ್ಮಿಷನ್​ ಕೊಟ್ಟಿದೆ. ಹೀಗಾಗಿ, ಶಾಸಕ ಸೋಮಶೇಖರ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಶಾಸಕ ಸೋಮಶೇಖರ ರೆಡ್ಡಿ

ಈ ಕುರಿತು ನಗರದಲ್ಲಿ ಮಾತನಾಡಿದ ಶಾಸಕ, ಸದ್ಯ ಯಾವುದೇ ರಾಜಕೀಯ ಚಟುವಟಿಕೆ ಮಾಡಲ್ಲ. ಮನೆಯಲ್ಲಿ ನೆಮ್ಮದಿಯಾಗಿರುತ್ತೇವೆ. ನಮ್ಮ ಬೇಡಿಕೆ ನ್ಯಾಯ ಸಮ್ಮತ ಇತ್ತು. ಅದಕ್ಕೆ ಸುಪ್ರೀಂಕೋರ್ಟ್ ಮನ್ನಣೆ ನೀಡಿದೆ ಎಂದರು.

ಶ್ರಾವಣ ಮಾಸದ ಸಲುವಾಗಿ ಅವನು ಬರುತ್ತಿದ್ದಾನೆ. ಕಾರ್ಯಕರ್ತರಲ್ಲಿ ತುಂಬಾ ಉತ್ಸಾಹ ತುಂಬಿದೆ. ಅವನಿಲ್ಲ ಅಂದ್ರೆ ನಮಗೆ ಕಷ್ಟ ಆಗುತ್ತೆ. ಬರುತ್ತಿದ್ದಾನೆ, ನೋಡೋಣಾ. ಎಲ್ಲ ಮಾತನಾಡುತ್ತೇವೆ ಎಂದು ತಿಳಿಸಿದರು.

ಓದಿ:ಬಳ್ಳಾರಿಗೆ ’ಗಾಲಿ’ ಹೋಗಬಹುದು: ಜನಾರ್ದನ ರೆಡ್ಡಿಗೆ ಕೊನೆಗೂ ಸಿಕ್ತು ಸುಪ್ರೀಂ ಪರ್ಮಿಷನ್​..!

ABOUT THE AUTHOR

...view details