ಬಳ್ಳಾರಿ:ಶಾಸಕ ಜಿ.ಸೋಮಶೇಖರ ರೆಡ್ಡಿ ಬಳ್ಳಾರಿಯ ಕೋಟೆ ಪ್ರದೇಶದಲ್ಲಿರುವ ಕೋಟೆ ಮಲ್ಲೇಶ್ವರ ಸ್ವಾಮಿ ಸನ್ನಿಧಿಗೆ ತೆರಳಿ ಸುಮಾರು 16,004 ಸಾವಿರಕ್ಕೂ ಅಧಿಕ ತೆಂಗಿನಕಾಯಿ ಹರಕೆ ತೀರಿಸಿದ್ದಾರೆ. ಈ ವೇಳೆ ಜಿ.ಸೋಮಶೇಖರ ರೆಡ್ಡಿಗೆ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಸಾಥ್ ನೀಡಿದ್ದಾರೆ.
ತುಂಗಭದ್ರಾ ಜಲಾಶಯ ಭರ್ತಿಗಾಗಿ ಶಾಸಕ ಸೋಮಶೇಖರರೆಡ್ಡಿ ಉಪವಾಸ ವ್ರತ..! - kannadanews
ಕೋಟೆ ಪ್ರದೇಶದಲ್ಲಿರುವ ಕೋಟೆ ಮಲ್ಲೇಶ್ವರ ಸ್ವಾಮಿಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿಯವರು 16 ಸಾವಿರಕ್ಕೂ ಅಧಿಕ ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ರು.
ದೇಗುಲದ ಒಳಗೆ ತೆರಳಿ ಶಾಸಕ ಸೋಮಶೇಖರರೆಡ್ಡಿ, ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವರು ಕೋಟೆ ಮಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಸೋಮಶೇಖರರೆಡ್ಡಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಭರ್ತಿಗಾಗಿ ನಾಳೆಯಿಂದಲೇ ಉಪವಾಸ ವ್ರತಾಚರಣೆ ಮಾಡುವೆ ಎಂದು ತಿಳಿಸಿದ್ರು. ಜಿಲ್ಲೆಯಲ್ಲಿ ಭೀಕರ ಬರದ ಕರಿಛಾಯೆ ಆವರಿಸಿದೆ. ಹೀಗಾಗಿ, ಈ ಜಲಾಶಯದ ಭರ್ತಿಗಾಗಿ ಹನುಮನ ವ್ರತಾಚರಣೆ ಮಾಡಲಾಗುವುದು ಎಂದ್ರು. 2009ನೇ ಇಸ್ವಿಯಲ್ಲಿ 18 ದಿನಗಳ ಕಾಲ ಹನುಮ ವ್ರತಾಚರಣೆ ಮಾಡಿದ್ದೆ. ಆಗ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿತ್ತು. ಹತ್ತು ವರ್ಷಗಳ ನಂತರ, ಈಗ ಹನುಮ ವ್ರತಾಚರಣೆ ಮಾಡುವಂತೆ ಆ ಭಗವಂತ ನನಗೆ ಆಶೀರ್ವದಿಸಿದ್ದಾನೆ. ಹಾಗಾಗಿ ನಾನೀಗ ಉಪವಾಸ ವ್ರತಾಚರಣೆ ಮಾಡುವೆ ಎಂದರು.
ಇದೇ ವೇಳೆ, ಮಾತನಾಡಿದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ, ಹನುಮ ಭಕ್ತ ನನ್ನ ಸಹೋದರ. ತುಂಗಭದ್ರಾ ಜಲಾಶಯದ ಭರ್ತಿಗಾಗಿ ಉಪವಾಸ ವ್ರತಾಚರಣೆ ಮಾಡುತ್ತಿರುವುದು ನನಗೆ ಖುಷಿ ತಂದಿದೆ. ನಮ್ಮ ಕುಟುಂಬದಲ್ಲಿ ಹನುಮನ ಭಕ್ತರು ಇರೋದರಿಂದ ಒಳಿತಾಗಲಿದೆ ಎಂದ್ರು.