ಹೊಸಪೇಟೆ: ಸಿಎಂ ಬದಲಾವಣೆ ಕುರಿತು ಪಕ್ಷದ ಚೌಕಟ್ಟಿನಲ್ಲಿ ಚರ್ಚೆಯಾಗಿಲ್ಲ. ಈ ಕುರಿತು ಹೈಕಮಾಂಡ್ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ತೀರ್ಮಾನ ಮಾಡಲಿದ್ದಾರೆ ಎಂದು ಸುರಪುರ ಶಾಸಕ ರಾಜುಗೌಡ ಹೇಳಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಹಾಗೂ ರಾಜ್ಯಾಧ್ಯಕ್ಷರು ಸಿಎಂ ಆಗಿ ಯಡಿಯೂರಪ್ಪ ಅವರು ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ, ಜು.26 ಕ್ಕೆ ಸರ್ಕಾರ ರಚನೆಯಾಗಿ 2 ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಜು.25 ಕ್ಕೆ ಔತಣಕೂಟವನ್ನು ಆಯೋಜಿಸಲಾಗಿದೆ. ಇದಕ್ಕೆ ಕೆಲವರು ವಿಶೇಷ ಅರ್ಥವನ್ನು ನೀಡಿ ಮಾತನಾಡುತ್ತಿದ್ದಾರೆ. ನಾಯಕತ್ವದ ಕುರಿತು ಯಾವುದೇ ಗೊಂದಲವಿಲ್ಲ. ನಮ್ಮ ಕೆಲ ಶಾಸಕರು ಹಾಗೂ ಮಾಧ್ಯಮದಲ್ಲಿ ನಾಯಕತ್ವ ಕುರಿತು ಚರ್ಚೆಯಾಗುತ್ತಿದೆ ಎಂದರು.
ಆಡಿಯೋಗೆ ಹೆಚ್ಚಿನ ಮಹತ್ವ ನೀಡುತ್ತಿರೋ ಅಥವಾ ವ್ಯಕ್ತಿಗೆ ಹೆಚ್ಚಿನ ಮಹತ್ವ ನೀಡುತ್ತೀರಿ? ನಳಿನ್ ಕುಮಾರ್ ಕಟೀಲ್ ಸರಳ ಸಜ್ಜನ ರಾಜಕಾರಣಿ. ಹಾಗಾಗಿ ಅವರು ಆ ರೀತಿಯಲ್ಲಿ ಮಾತನಾಡುವುದಕ್ಕೆ ಸಾಧ್ಯವಿಲ್ಲ. ದುಡಿಕಿ ಹಾಗೂ ಆವೇಶದಲ್ಲಿ ಅವರು ಮಾತನಾಡುವುದಿಲ್ಲ. ನಳಿನ್ ಕುಮಾರ್ ಕಟೀಲ್ ಅವರ ಧ್ವನಿಯನ್ನು ಯಾರೋ ಡಬ್ ಮಾಡಿದ್ದಾರೆ ಎಂದರು.