ಬಳ್ಳಾರಿ: ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 19 ಗ್ರಾ. ಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒಗಳು ಹಾಗೂ ರೈತರೊಂದಿಗೆ ಶಾಸಕ ಬಿ. ನಾಗೇಂದ್ರ ಅವರು ವಿಡಿಯೋ ಸಂವಾದ ನಡೆಸಿದರು.
ಅಧಿಕಾರಿಗಳು, ರೈತರೊಂದಿಗೆ ಶಾಸಕ ನಾಗೇಂದ್ರ ಸಂವಾದ: ಸಮಸ್ಯೆಗಳ ಇತ್ಯರ್ಥ - ಬಳ್ಳಾರಿ ತಾಲೂಕು ಪಂಚಾಯ್ತಿಯ ವಾರ್ ರೂಂ
ಬಳ್ಳಾರಿ ತಾಲೂಕು ಪಂಚಾಯ್ತಿಯ ವಾರ್ ರೂಂ ನಲ್ಲಿ ಗ್ರಾ. ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒಗಳು ಹಾಗೂ ರೈತರೊಂದಿಗೆ ಶಾಸಕ ಬಿ. ನಾಗೇಂದ್ರ ಅವರು ವಿಡಿಯೋ ಸಂವಾದ ನಡೆಸಿದರು.
![ಅಧಿಕಾರಿಗಳು, ರೈತರೊಂದಿಗೆ ಶಾಸಕ ನಾಗೇಂದ್ರ ಸಂವಾದ: ಸಮಸ್ಯೆಗಳ ಇತ್ಯರ್ಥ MLA Nagendra's video conference with officials and farmers](https://etvbharatimages.akamaized.net/etvbharat/prod-images/768-512-6930547-682-6930547-1587778762957.jpg)
ಬಳ್ಳಾರಿ ತಾಲೂಕು ಪಂಚಾಯ್ತಿಯ ವಾರ್ ರೂಂ ನಲ್ಲಿ ವಿಡಿಯೋ ಸಂವಾದ ಜರುಗಿತು. ಈ ಸಂದರ್ಭ ಗ್ರಾಮದ ನೈರ್ಮಲ್ಯ ಹಾಗೂ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ರೈತರ ಕೃಷಿ ಸಂಬಂಧಿತ ಅನೇಕ ಸಮಸ್ಯೆಗಳನ್ನ ಅಲಿಸಿದರು. ಆನಂತರ ಸಂಬಂಧಪಟ್ಟ ಅಧಿಕಾರಿಗಳನ್ನು ಆನ್ಲೈನ್ನಲ್ಲಿಯೇ ಸಂಪರ್ಕಿಸಿ ಸಮಸ್ಯೆ ಪರಿಹರಿಸಿದರು.
ಇನ್ನುಳಿದಂತೆ ರೈತರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವಂತೆ ಸಭೆಯಲ್ಲೆ ಇದ್ದ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಜಿಪಂ ಸದಸ್ಯರಾದ ಅಲ್ಲಂ ಪ್ರಶಾಂತ್, ಹಂಪಮ್ಮ ಗೋವಿಂದ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸಪ್ಪ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.