ಹೊಸಪೇಟೆ:ನಾನು ಪಕ್ಷದ ಪರವಾಗಿದ್ದು, ಅದರಲ್ಲೇ ಯಡಿಯೂರಪ್ಪ, ಕಟೀಲ್ ಎಲ್ಲರೂ ಬರುತ್ತಾರೆ. ಬಿಜೆಪಿಯಿಂದ ಯಡಿಯೂರಪ್ಪ ಅವರು ಸಿಎಂ ಆಗಿದ್ದಾರೆ. ಅವರೇ ನಮ್ಮ ನಾಯಕರು, ಅದರಲ್ಲಿ ಯಾವುದೇ ಅನುಮಾನ ಇಲ್ಲ. ನಾನು ಯಾವುದೇ ಸಹಿ ಮಾಡಿಲ್ಲ. ನನ್ನ ಬಳಿ ಯಾರೂ ಕೂಡ ಬಂದಿಲ್ಲ ಎಂದು ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಸ್ಪಷ್ಟಪಡಿಸಿದರು.
ನಾನು ಬಿಜೆಪಿಯಲ್ಲಿದ್ದು, ಯಡಿಯೂರಪ್ಪ ನಮ್ಮ ಸಿಎಂ: ಶಾಸಕ ಕರುಣಾಕರ ರೆಡ್ಡಿ
ನಾನು ಬಿಜೆಪಿಯಲ್ಲಿದ್ದು, ಪಕ್ಷದಿಂದ ಯಡಿಯೂರಪ್ಪ ಅವರು ಸಿಎಂ ಆಗಿದ್ದಾರೆ. ಅವರೇ ನಮ್ಮ ನಾಯಕರು ಅದರಲ್ಲಿ ಯಾವುದೇ ಅನುಮಾನ ಇಲ್ಲವೆಂದು ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಬಿಎಸ್ವೈ ಪರ ಬ್ಯಾಟ್ ಬೀಸಿದ್ದಾರೆ.
ಶಾಸಕ ಕರುಣಾಕರ ರೆಡ್ಡಿ
ಓದಿ: Viral Video- ರಸ್ತೆಯಲ್ಲಿ ನಿಂತಿದ್ದ ಮಕ್ಕಳ ಮೇಲೆ ನಾಯಿಯ ಅಟ್ಟಹಾಸ
ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಸಹಿ ಮಾಡಿಲ್ಲ. ನನ್ನ ಬಳಿ ಯಾರೂ ಕೂಡ ಬಂದಿಲ್ಲ. ಹೈಕಮಾಂಡ್ ಎಲ್ಲಿಯವರೆಗೆ ಸಿಎಂ ಆಗಿರುವುದಕ್ಕೆ ಅವಕಾಶ ನಿಡುತ್ತದೆಯೋ ಅಲ್ಲಿಯವರೆಗೆ ಇರುತ್ತೇನೆ ಎಂದು ಸ್ವತಃ ಸಿಎಂ ಹೇಳಿದ್ದಾರೆ. ಅವರೇ ಹೀಗೆ ಹೇಳಿದ ಮೇಲೆ ಬೇರೆ ರೀತಿಯ ಚರ್ಚೆಗೆ ಅರ್ಥವಿಲ್ಲ. ಶಾಸಕ ರೇಣುಕಾಚಾರ್ಯ ಅವರು ಸಹಿ ಸಂಗ್ರಹಿಸುತ್ತಿರುವುದು ತಿಳಿದಿಲ್ಲ ಎಂದು ಹೇಳಿದರು.