ಬಳ್ಳಾರಿ: ಬಿ.ಶ್ರೀರಾಮುಲು ಅವರು ಜಿಲ್ಲೆಯ 5 ಮೀಸಲಾತಿ ಕ್ಷೇತ್ರಗಳ ಪೈಕಿ ಯಾವುದಾದರು ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿ. ಅವರ ವಿರುದ್ಧ ನಾನು ಪ್ರತಿ ಸ್ಪರ್ಧಿಯಾಗಿ ನಿಂತುಕೊಳ್ಳುತ್ತೇನೆ. ತಾಕತ್ತಿದ್ದರೆ ಅವರು ಗೆದ್ದು ಬರಲಿ ಎಂದು ಕಂಪ್ಲಿ ವಿಧಾನಸಭಾ ಶಾಸಕ ಜೆ.ಎನ್.ಗಣೇಶ ಸವಾಲೆಸೆದಿದ್ದಾರೆ.
ತಾಕತ್ತಿದ್ದರೆ 5 ಮೀಸಲಾತಿ ಕ್ಷೇತ್ರಗಳಲ್ಲಿ ನಿಂತು ಗೆದ್ದು ಬನ್ನಿ: ಶ್ರೀರಾಮುಲುಗೆ ಶಾಸಕ ಗಣೇಶ ಸವಾಲು - ಶ್ರೀರಾಮುಲುಗೆ ಶಾಸಕ ಗಣೇಶ ಸವಾಲು
ಸಚಿವ ಶ್ರೀರಾಮುಲು ಬಳ್ಳಾರಿ ಜಿಲ್ಲೆಯ 5 ಮೀಸಲಾತಿ ಕ್ಷೇತ್ರಗಳ ಪೈಕಿ ಯಾವುದಾದರು ಒಂದು ಕ್ಷೇತ್ರದಲ್ಲಿ ನಿಂತು ತಾಕತ್ತಿದ್ದರೆ ಗೆದ್ದು ಬರಲಿ ಎಂದು ಕಂಪ್ಲಿ ವಿಧಾನಸಭಾ ಶಾಸಕ ಜೆ.ಎನ್.ಗಣೇಶ ಸವಾಲು ಹಾಕಿದ್ದಾರೆ.
![ತಾಕತ್ತಿದ್ದರೆ 5 ಮೀಸಲಾತಿ ಕ್ಷೇತ್ರಗಳಲ್ಲಿ ನಿಂತು ಗೆದ್ದು ಬನ್ನಿ: ಶ್ರೀರಾಮುಲುಗೆ ಶಾಸಕ ಗಣೇಶ ಸವಾಲು](https://etvbharatimages.akamaized.net/etvbharat/prod-images/768-512-5159676-thumbnail-3x2-net.jpg)
ಜಿಲ್ಲೆಯ ಕಂಪ್ಲಿ ತಾಲೂಕಿನ ಬಾಳಾಪುರ ಗ್ರಾಮದಲ್ಲಿ ನಡೆದ ಸಿಸಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಹಗುರವಾಗಿ ಮಾತಾಡೋದನ್ನು ಸಚಿವ ಶ್ರೀರಾಮುಲು ಬಿಡಬೇಕು. ಅವರು ಏಕಾಂಗಿಯಲ್ಲ, ಈ ರಾಜಕಾರಣದಲ್ಲಿ ಎಲ್ಲಿಯವರೆಗೂ ಇರುತ್ತಾರೋ ಅಲ್ಲಿವರೆಗೆ ನಾವೆಲ್ಲ ಅವರೊಂದಿಗೆ ಇದ್ದೇವೆ ಎಂದರು.
ನಿಮಗೇನಾದ್ರೂ ಮತ್ತೊಂದು ಉಪಚುನಾವಣೆ ಎದುರಿಸಬೇಕೆಂಬ ಕಾತುರ ಇದ್ರೆ ಮೊಳಕಾಲ್ಮೂರು ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು, ಈ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಮೀಸಲಾದ ಕ್ಷೇತ್ರದಲ್ಲಿ ಸ್ಪರ್ಧಿಸಿ. ನಿಮ್ಮ ಎದುರಾಳಿಯಾಗಿ ನಾನು ಸ್ಪರ್ಧಿಸುವೆ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಎಂದ ಮಾತ್ರಕ್ಕೆ ಯಾರ ಬಗೆಗೂ ಹಗುರವಾಗಿ ಮಾತನಾಡಬಹುದಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.