ಬಳ್ಳಾರಿ:ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಯ ಹುರುಳಿಯಾಳ್ ಗ್ರಾಮಕ್ಕೆ ಶಾಸಕ ಎನ್. ವೈ.ಗೋಪಾಲಕೃಷ್ಣ ಭೇಟಿ ನೀಡಿ ಮುರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣಕ್ಕೆ 9 ಎಕರೆ ಸ್ಥಳ ಪರಿಶೀಲನೆ ನಡೆಸಿದರು.
ಬಳ್ಳಾರಿ: ಮುರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ - ಶಾಸಕ ಎನ್. ವೈ.ಗೋಪಾಲಕೃಷ್ಣ
ಶಾಸಕ ಎನ್. ವೈ.ಗೋಪಾಲಕೃಷ್ಣ ಹುರುಳಿಯಾಳ್ ಗ್ರಾಮಕ್ಕೆ ಭೇಟಿ ನೀಡಿ ಮುರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದರು.
Place Inspection
ನಂತರ ಮಾತನಾಡಿದ ಅವರು, ಈಗಾಗಲೇ ಸರ್ಕಾರ ದಿಂದ 25 ಕೋಟಿ ಹಣ ಮಂಜೂರು ಮಾಡಿದ್ದು ಶೀಘ್ರದಲ್ಲೇ ಇಲಾಖೆಯಿಂದ ಅನುಮೋದನೆ ಪಡೆದುಕೊಂಡು ಟೆಂಡರ್ ಕರೆದು ಕೆಲಸ ಮಾಡಲಾಗುವುದು ಎಂದು ಹೇಳಿದರು .
ಈ ವೇಳೆ ತಾಲೂಕು ದಂಡಾಧಿಕಾರಿ ಮಹಾಬಲೇಶ್ವರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಎಂ ಬಸಣ್ಣ, ಇಂಜಿನಿಯರ್ಗಳಾದ ರವಿಚಂದ್ರ, ಮಲ್ಲಿಕಾರ್ಜುನ, ರಾಜೇಶ್, ರಾಮಾಂಜನೇಯ, ಮಹೇಶ್ವರಪ್ಪ, ಪಿಡಿಒ ಕವಿತಾ ಇತರರು ಇದ್ದರು.