ಕರ್ನಾಟಕ

karnataka

ETV Bharat / state

ಬಳ್ಳಾರಿ ಜಿಲ್ಲೆ ಯಾವತ್ತೂ ಕರ್ನಾಟಕದಲ್ಲೇ ಇರಲಿದೆ: ಸೋಮಶೇಖರ ರೆಡ್ಡಿ

ಬೆಳಗಾವಿ ಗಡಿ ವಿವಾದಂತೆಯೇ ಬಳ್ಳಾರಿಯಲ್ಲೂ ಕೂಡ ಗಡಿ ವಿವಾದ ಸೃಷ್ಟಿಯಾಗಬಹುದೆಂಬ ಕಾರಣವನ್ನೂ ಕೂಡ ನಾನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವೆ. ಆದರೂ, ಸಿಎಂ ಬಿಎಸ್ ವೈ ಇಂತಹ ನಿರ್ಧಾರವನ್ನ ತೆಗೆದುಕೊಂಡಿದ್ದಾರೆಂದು ಶಾಸಕ ಸೋಮಶೇಖರರೆಡ್ಡಿ ಅಸಮಾಧಾನ ವ್ಯಕ್ತ ಪಡಿಸಿದರು.

MLA Gali Somashekara Reddy reaction Ballari Separate district Issue
ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿಕೆ

By

Published : Jan 25, 2021, 10:54 AM IST

Updated : Jan 25, 2021, 11:39 AM IST

ಬಳ್ಳಾರಿ:ಬಳ್ಳಾರಿ ಜಿಲ್ಲೆ ಯಾವತ್ತೂ ಕೂಡ ಕರ್ನಾಟಕ ರಾಜ್ಯದಲ್ಲೇ ಇರಲಿದೆ. ನೆರೆಯ ಆಂಧ್ರಪ್ರದೇಶ ರಾಜ್ಯಕ್ಕೆ‌ ಈ ಜಿಲ್ಲೆ ಸೇರಲಿದೆ ಎಂಬ ಊಹಾಪೋಹದ ಸುದ್ದಿಗೆ ಕಿವಿಗೊಡಬಾರದೆಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ಕಿವಿಮಾತು ಹೇಳಿದ್ದಾರೆ.

ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿಕೆ

ನಗರ ಹೊರವಲಯದ ವೇಣಿ ವೀರಾಪುರ ಬಳಿಯಿರುವ ಘನತ್ಯಾಜ್ಯ ವಸ್ತುಗಳ ವೈಜ್ಞಾನಿಕ ವಿಲೇವಾರಿ ಘಟಕಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆ ನೆರೆಯ ಆಂಧ್ರಪ್ರದೇಶಕ್ಕೆ ಸೇರಲಿದೆ ಎಂದು ಯಾರೋ ಸಣ್ಣ ಮನಸ್ಸವುಳ್ಳವರು ಈ ತರನಾದ ಹೇಳಿಕೆ ನೀಡಿದರೆ, ಅದನ್ನೆಲ್ಲಾ ನಾವು ಒಪ್ಪುವಂತಹದಲ್ಲ. ಅಂತಹವರ ಹೇಳಿಕೆಗೆ ಕಿವಿಗೊಡಬಾರದು. ಬಳ್ಳಾರಿ ಜಿಲ್ಲೆಯ ಯಾವತ್ತೂ ಕೂಡ ಕರ್ನಾಟಕದಲ್ಲೇ ಇರಲಿದೆ. ಹೀಗಾಗಿ, ನಾನೂ ಕೂಡ ಅಖಂಡ ಬಳ್ಳಾರಿ ಜಿಲ್ಲೆಯಾಗಿಯೇ ಉಳಿಸಬೇಕೆಂದು ಸಿಎಂ ಬಿಎಸ್ ಯಡಿಯೂರಪ್ಪ ಅವರತ್ತ ಬಹಳಷ್ಟು ಸಾರಿ ಮನವಿ ಮಾಡಿದರೂ ಕೂಡ ಕೇವಲ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರೊಬ್ಬರ ಮಾತನ್ನ ಕೇಳಿ ಅಖಂಡ ಬಳ್ಳಾರಿ ಜಿಲ್ಲೆಯನ್ನ ವಿಭಜನೆಗೆ ಮುಂದಾಗಿರೋದು ಅತ್ಯಂತ ಖೇದಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಓದಿ : ರಾಜ್ಯದ ಇಬ್ಬರು ಬಾಲಕರಿಗೆ ‘ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರಶಸ್ತಿ: ಮೋದಿಯೊಂದಿಗೆ ಸಂವಾದಕ್ಕೆ ಕ್ಷಣಗಣನೆ

ಬೆಳಗಾವಿ ಗಡಿ ವಿವಾದಂತೆಯೇ ಬಳ್ಳಾರಿಯಲ್ಲೂ ಕೂಡ ಗಡಿ ವಿವಾದ ಸೃಷ್ಟಿಯಾಗಬಹುದೆಂಬ ಕಾರಣವನ್ನೂ ಕೂಡ ನಾನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವೆ. ಆದರೂ, ಸಿಎಂ ಬಿಎಸ್ ವೈ ಇಂತಹ ನಿರ್ಧಾರವನ್ನ ತೆಗೆದುಕೊಂಡಿದ್ದಾರೆಂದು ಶಾಸಕ ಸೋಮಶೇಖರರೆಡ್ಡಿ ಅಸಮಾಧಾನ ವ್ಯಕ್ತ ಪಡಿಸಿದರು.

Last Updated : Jan 25, 2021, 11:39 AM IST

ABOUT THE AUTHOR

...view details