ಬಳ್ಳಾರಿ:ಒಂದು ಪಕ್ಷದಲ್ಲಿ ಕಾರ್ಯಕರ್ತರ ಪಾತ್ರ ಮಹತ್ವವಾದದ್ದು. ನಮ್ಮ ಬಿಜೆಪಿ ಕಾರ್ಯಕರ್ತರನ್ನು ಅಭಿಮಾನಿ ದೇವರೆಂದೇ ಭಾವಿಸಿದ್ದೇನೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಪಕ್ಷ ಬಲವರ್ಧನೆಯಲ್ಲಿ ಕಾರ್ಯಕರ್ತರ ಪಾತ್ರ ಮಹತ್ವವಾದದ್ದು: ಶಾಸಕ ಗಾಲಿ ಸೋಮಶೇಖರರೆಡ್ಡಿ
ನಾನು ಯಾವಾಗಲೂ ಪಕ್ಷದ ಕಾರ್ಯಕರ್ತರನ್ನು ಅಭಿಮಾನಿ ದೇವರೆಂದು ಕರೆಯುವೆ. ಅವರಿಲ್ಲದೆ ನಮಗೆ ಈ ಸ್ಥಾನಮಾನ ಸಿಕ್ಕೋದಿಲ್ಲ ಎಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ತಿಳಿಸಿದರು.
ನಗರದ ತಾಳೂರು ರಸ್ತೆಯಲ್ಲಿರುವ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿಂದು ಸಂಜೆ ನಡೆದ ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಜಿಲ್ಲಾ ಪ್ರಮುಖರ ಚುನಾವಣೆ ಸಭೆಯಲ್ಲಿ ಮಾತನಾಡಿ, ನಾನು ಯಾವಾಗಲೂ ಕಾರ್ಯಕರ್ತರನ್ನು ಅಭಿಮಾನಿ ದೇವರೆಂದು ಕರೆಯುವೆ. ಅವರಿಲ್ಲದೆ ನಮಗೆ ಈ ಸ್ಥಾನಮಾನ ಸಿಕ್ಕೋದಿಲ್ಲ ಎಂದು ತಿಳಿಸಿದರು.
ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ, ಬಳ್ಳಾರಿ ಮತ್ತು ಹೊಸಪೇಟೆ ಮಂಡಲದಲ್ಲಿ ಅರ್ಧದಷ್ಟು ಶಿಕ್ಷಕ ಮತದಾರರಿದ್ದಾರೆ. ಕೇವಲ ಐದು ದಿನಗಳಲ್ಲಿ ಪ್ರತಿ ಶಿಕ್ಷಕರ ಮನೆ ಮನೆಗೆ ಭೇಟಿ ಕೊಟ್ಟು ಬಿಜೆಪಿ ಅಭ್ಯರ್ಥಿ ಶಶಿಲ್ ಜಿ. ನಮೋಶಿಯವರಿಗೆ ಮತ ಹಾಕುವಂತೆ ಮನವಿ ಮಾಡಿಕೊಳ್ಳಬೇಕು. ಈ ಎರಡು ಮಂಡಲದಲ್ಲಿ ಬಹುಪಾಲು ಶಿಕ್ಷಕರ ಮನಸೆಳೆದರೆ ಸಾಕು. ಬಿಜೆಪಿ ಅಭ್ಯರ್ಥಿ ಶಶಿಲ್ ಜಿ. ನಮೋಶಿ ಗೆಲುವು ಸಾಧಿಸಿದಂತೆಯೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.