ಬಳ್ಳಾರಿ :ನಗರದ ಹೊರವಲಯ ಹಲಕುಂದಿ ಬಳಿಯ ಅಂತಾರಾಜ್ಯ ಚೆಕ್ ಪೋಸ್ಟ್ಗೆ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಂಧ್ರದಿಂದ ಗಡಿಯೊಳಗೆ ಬರುವವರ ಮೇಲೆ ನಿಗಾ ಇಡಿ: ಶಾಸಕ ನಾಗೇಂದ್ರ - MLA B. Nagendra visits inter State -border check post
ಬಳ್ಳಾರಿ ನಗರದ ಹೊರವಲಯದಲ್ಲಿರುವ ಅಂಧ್ರಪ್ರದೇಶ - ಕರ್ನಾಟಕ ಗಡಿ ಚೆಕ್ಪೋಸ್ಟ್ಗೆ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
![ಆಂಧ್ರದಿಂದ ಗಡಿಯೊಳಗೆ ಬರುವವರ ಮೇಲೆ ನಿಗಾ ಇಡಿ: ಶಾಸಕ ನಾಗೇಂದ್ರ MLA B. Nagendra visits inter State -border check post](https://etvbharatimages.akamaized.net/etvbharat/prod-images/768-512-7065903-1004-7065903-1588659861967.jpg)
ಅಂತರಾಜ್ಯ ಗಡಿ ಚೆಕ್ಪೋಸ್ಟ್ಗೆ ಶಾಸಕ ಬಿ.ನಾಗೇಂದ್ರ ಭೇಟಿ
ಈ ವೇಳೆ ಮಾತನಾಡಿ, ಗಡಿಭಾಗದಲ್ಲಿ ವಾಹನಗಳನ್ನು ತಪಾಸಣೆಗೆ ಒಳಪಡಿಸದೇ ಜಿಲ್ಲೆಯೊಳಗೆ ಬಿಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಈ ದಿನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಬೇಕು. ನೆರೆಯ ಆಂಧ್ರ ಪ್ರದೇಶದ ಕರ್ನೂಲ್ ಹಾಗೂ ಅನಂತಪುರ ಜಿಲ್ಲೆಗಳಲ್ಲಿ ಹೆ್ಚ್ಚಿನ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಇವೆ. ಹೀಗಾಗಿ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.
ಅಂತರಾಜ್ಯ ಗಡಿ ಚೆಕ್ಪೋಸ್ಟ್ಗೆ ಶಾಸಕ ಬಿ.ನಾಗೇಂದ್ರ ಭೇಟಿ
ರೂಪನಗುಡಿ ಜಿಲ್ಲಾ ಪಂಚಾಯತ್ ಸದಸ್ಯ ಅಲ್ಲಂ ಪ್ರಶಾಂತ್, ಮುಖಂಡರಾದ ಅಸುಂಡಿ ನಾಗರಾಜಗೌಡ, ನಾನಿ, ವಿಜಯ ಕುಮಾರ ಶಾಸಕರಿಗೆ ಸಾಥ್ ನೀಡಿದರು.