ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆ ಘೋಷಣೆ ಆಗ್ರಹಿಸಿ ಬಳ್ಳಾರಿಯಲ್ಲಿಂದು ನಡೆದ ಬಂದ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಗಡಿಗಿ ಚನ್ನಪ್ಪ ವೃತ್ತಕ್ಕೆ ಈ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘದ ಮುಖಂಡರು ಜಮಾಯಿಸಿ, ಅಲ್ಲಿಂದಲೇ ವಿವಿಧ ಘೋಷಣೆಗಳನ್ನು ಕೂಗಿದರು. ತುಂಗಭದ್ರಾ ರೈತ ಸಂಘ ಹಾಗೂ ನಾನಾ ಕನ್ನಡ ಪರ ಸಂಘಟನೆಗಳು ಗಡಿಗಿ ಚನ್ನಪ್ಪ ವೃತ್ತದಲ್ಲಿ ಟಯರ್ ಗೆ ಬೆಂಕಿ ಹಚ್ಚುವ ಮುಖೇನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿನಿತ್ಯ ಬಳ್ಳಾರಿಯಿಂದ ವಿವಿಧ ಪ್ರದೇಶಗಳಾದ ಕುಡುತಿನಿ, ದರೋಜಿ, ಪಿ.ಕೆ ಹಳ್ಳಿ, ಹೊಸಪೇಟೆ, ತೋರಣಗಲ್ಲು ಜಿಂದಾಲ್ ಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಬಸ್ ಗಳಲ್ಲಿ ಪ್ರಯಾಣ ಮಾಡುವ ನೌಕರರು ಇಂದು ಬಸ್ ಸೇವೆ ಇಲ್ಲದ ಕಾರಣ ರೈಲಿನಲ್ಲಿ ಪ್ರಯಾಣ ಮಾಡಿದರು.