ಕರ್ನಾಟಕ

karnataka

ETV Bharat / state

ಬಳ್ಳಾರಿ, ಹೊಸಪೇಟೆಯಲ್ಲಿ ಭಾರತ್​ ಬಂದ್​ಗೆ ಮಿಶ್ರ ಪ್ರತಿಕ್ರಿಯೆ - ಬಳ್ಳಾರಿ ಪ್ರತಿಭಟನೆ ಸುದ್ದಿ

ಹೊಸಪೇಟೆ ಹಾಗೂ ಬಳ್ಳಾರಿಯಲ್ಲಿ ಭಾರತ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಳ್ಳಾರಿಯಲ್ಲಿ ವಿವಿಧ  ಕಾರ್ಮಿಕ ಸಂಘಟನೆಗಳು ಹಾಗೂ ಅಂಚೆ ನೌಕರರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

Mixed response to Bharat Band at Bellary, Hospet
ಬಳ್ಳಾರಿ, ಹೊಸಪೇಟೆಯಲ್ಲಿ ಭಾರತ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

By

Published : Jan 8, 2020, 7:56 PM IST

ಹೊಸಪೇಟೆ :ಹೊಸಪೇಟೆ ಹಾಗೂ ಬಳ್ಳಾರಿಯಲ್ಲಿ ಭಾರತ್​ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೊಸಪೇಟೆಯಲ್ಲಿ ಭಾರತ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

ಈ ಕುರಿತು ಮಾತನಾಡಿದ ಭಾರತ ಕಮ್ಯುನಿಸ್ಟ್ ಪಕ್ಷದ ತಾಲ್ಲೂಕು ಅಧ್ಯಕ್ಷ ಭಾಸ್ಕರ ರೆಡ್ಡಿ, ಮೋದಿ ಆಡಳಿತವನ್ನು ನೋಡಿ ಜನರು ಬೇಸರಗೊಂಡಿದ್ದಾರೆ. ದಿನದಿಂದ ದಿನಕ್ಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ವಸ್ತುಗಳ ಬೆಲೆಯ ಏರಿಕೆಯಂತೆ ಕೂಲಿ ಕಾರ್ಮಿಕರ ವೇತನವನ್ನು ಸರ್ಕಾರ ಏಕೆ ಏರಿಸುತ್ತಿಲ್ಲವೇಕೆ?. ಕಾರ್ಮಿಕರ ಕೂಲಿಯನ್ನು ಹೆಚ್ಚಿಸಬೇಕು. ದಿನನಿತ್ಯ ವಸ್ತುಗಳ ಬೆಲೆ ಇಳಿಸಬೇಕು. ದಿನಗೂಲಿ ನೌಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಕನಿಷ್ಟ ವೇತನವನ್ನು ನಿಗದಿತ ಮಾಡಬೇಕು. ಆಟೋ ಚಾಲಕರಿಗೆ ವಸತಿಗಳನ್ನು ಕಟ್ಟಿಸಿಕೊಡಬೇಕು. ಕಾರ್ಮಿಕರ ಮಕ್ಕಳಿಗೆ ಉದ್ಯೋಗ ಶಿಕ್ಷಣದಲ್ಲಿ ಮೀಸಲಾತಿಯನ್ನು ನೀಡಬೇಕು. ಬಡವರಿಗೆ, ನಿರ್ಗತಿಕರಿಗೆ, ತುಳಿತಕ್ಕೆ ಒಳಪಟ್ಟವರಿಗೆ ಸರಿಯಾದ ರೀತಿಯಲ್ಲಿ ನ್ಯಾಯವನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಬಳ್ಳಾರಿಯಲ್ಲಿಯೂ ಪ್ರತಿಭಟನೆ :

ಭಾರತ ಬಂದ್ ಹಿನ್ನಲೆಯಲ್ಲಿ ಮೋತಿ ವೃತ್ತದಲ್ಲಿಂದು ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿ‌ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬಳ್ಳಾರಿ ನಗರದ ಜಿಲ್ಲಾ ಪ್ರಧಾನ ಅಂಚೆ ಕಚೇರಿಯಲ್ಲಿ ನೂರಾರು ಕೇಂದ್ರ ಸರ್ಕಾರಿ ನೌಕರರು ಮತ್ತು ಗ್ರಾಮೀಣ ಅಂಚೆ ನೌಕರರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಅಖಿಲ ಭಾರತೀಯ ಅಂಚೆ ನೌಕರರ ಸಂಘದ ಬಳ್ಳಾರಿ ವಿಭಾಗಿಯ ಕಾರ್ಯದರ್ಶಿ ಅಲ್ಲಾ ಸಾಬ್ ಮಾತನಾಡಿ, ಕೇಂದ್ರ ಸರ್ಕಾರದ ನೌಕರರ ಮತ್ತು ಕೆಲಸಗಾರರ ಸಮನ್ವಯ ಸಮಿತಿ ಹಾಗೂ ಹಾಗೂ ಗ್ರಾಮೀಣ ಅಂಚೆ ನೌಕರರ ನೇತೃತ್ವದಲ್ಲಿ ಒಂದು ದಿನದ ಮುಷ್ಕರವನ್ನು ಬಳ್ಳಾರಿ ವಿಭಾಗದ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿಯಿಂದ ಮಾಡುತ್ತಿದ್ದೇವೆ ಎಂದರು.

ಅಂಚೆ ನೌಕರರ ಸಂಘದ ಬಳ್ಳಾರಿ ವಿಭಾಗಿಯ ಕಾರ್ಯದರ್ಶಿ ಅಲ್ಲಾ ಸಾಬ್

ಕೇಂದ್ರ ಸರ್ಕಾರವು ಜಿ.ಡಿ.ಎಸ್ ನೌಕರರ. 7ನೇ ವೇತನ ಆಯೋಗ (ಕಮಲೇಶ್ ಚಂದರ ವರದಿ) ಸಂಪೂರ್ಣವಾಗಿ ಜಾರಿಗೊಳಿಸದೇ, ನೌಕರರಿಗೆ ಸವಲತ್ತುಗಳನ್ನು ಒದಗಿಸದೇ ಕಾರ್ಮಿಕರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಆದ್ದರಿಂದ ಒಂದು ದಿನದ ಮುಷ್ಕರ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನ 1976 ರಲ್ಲಿ‌ ಜಾರಿಗೆ ಬಂದಿದ್ದರೂ ಅದನ್ನು ಮೂಲೆಗುಂಪು ಮಾಡಿ ಡಿ.ಆರ್.ಟಿ.ಸಿ.ಎ ನೀತಿಯನ್ನು ತಂದು ನೌಕರರಿಗೆ ಶೋಷಣೆ ಮಾಡಿದ್ದಾರೆ. 10 ಬೇಡಿಕೆಗಳನ್ನು ಇಟ್ಟು ಮುಷ್ಕರ ಮಾಡುತ್ತಿದ್ದವೆ ಎಂದು ತಿಳಿಸಿದರು.

ಬೇಡಿಕೆ ಪತ್ರ

ಬೇಡಿಕೆಗಳು :

1. ಎನ್.ಪಿ.ಎಸ್ ರದ್ದು ಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದು.

2. ಕನಿಷ್ಠ ವೇತನ 21ಸಾವಿರ ರೂ ನಿಗದಿ ಮಾಡಬೇಕು.

3. ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ವಿರೋಧಿಸುವುದು‌

4. ಕಮಲೇಶ್ ಚಂದ್ರ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುವುದು.

5. ಜಿ.ಡಿ.ಎಸ್. ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪಡಿಗಣಿಸುವುದು.

6. 5 ದಿನಗಳ ಕೆಲಸ ದಿನಗಳನ್ನು ಜಾರಿಗೊಳಿಸುವುದು.

7. ಆರ್ಥಿಕ ಉನ್ನತೀಕರಣದಲ್ಲಿ very Good bench mark ರದ್ದುಗೊಳಿಸುವುದು ಮತ್ತು ಸೇವಾ ಅವಧಿ ಕನಿಷ್ಠ ಐದು ಬಡ್ತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಳ್ಳಾರಿ ನಗರ ಮತ್ತು ಗ್ರಾಮೀಣ ಅಂಚೆಯ ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ABOUT THE AUTHOR

...view details