ಬಳ್ಳಾರಿ:ಕೌಲ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಬಾಲಕರ ಬಾಲ ಮಂದಿರದ 16 ವರ್ಷದ ವೀರೇಶ್ ಎಂಬ ಬಾಲಕ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಬಳ್ಳಾರಿಯ ಸರ್ಕಾರಿ ಬಾಲ ಮಂದಿರದ ಬಾಲಕ ನಾಪತ್ತೆ - ಬಾಲಕ ಕಾಣೆ ಪ್ರಕರಣ
ಕೌಲ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಬಾಲಕರ ಬಾಲ ಮಂದಿರದ 16 ವರ್ಷದ ವೀರೇಶ್ ಎಂಬ ಬಾಲಕ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
![ಬಳ್ಳಾರಿಯ ಸರ್ಕಾರಿ ಬಾಲ ಮಂದಿರದ ಬಾಲಕ ನಾಪತ್ತೆ Missing child at Bellary](https://etvbharatimages.akamaized.net/etvbharat/prod-images/768-512-5807179-thumbnail-3x2-net.jpg)
ಕಾಣೆಯಾದ ಬಾಲಕ ವೀರೇಶ್
ಈ ಕುರಿತು ಕೌಲ್ ಬಜಾರ್ನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಾಲಕ ಜ. 4ರಂದು ಬೆಳಿಗ್ಗೆ 8 ಗಂಟೆಗೆ ಶಾಲೆಗೆ ಹೋಗುವುದಾಗಿ ಹೇಳಿ ಹೋದವನು ಮರಳಿ ಬಂದಿಲ್ಲ ಎನ್ನಲಾಗಿದೆ.
ಬಾಲಕನ ವಿವರ:ಎತ್ತರ 5 ಅಡಿ, ಸಾಧರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾನೆ. ಯಾರಿಗಾದರೂ ಬಾಲಕನ ಮಾಹಿತಿ ಸಿಕ್ಕಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.