ಕರ್ನಾಟಕ

karnataka

By

Published : Oct 17, 2019, 5:37 AM IST

ETV Bharat / state

ಗಣಿನಗರಿಯಲ್ಲೊಬ್ಬ ಮಿ‌ನಿ ಧ್ರುವ ಸರ್ಜಾ: 'ಪೊಗರು' ಸಿನಿಮಾ ಬಿಡುಗಡೆ ತನಕ ಗಡ್ಡ ತೆಗೆಯಲ್ವಂತೆ ಈ ಅಭಿಮಾನಿ

ಬಳ್ಳಾರಿಯ ನಿವಾಸಿ ಎಂ.ಜಿ. ಕನಕ ಅವರು ಥೇಟ್​​ ಧ್ರುವ ಸರ್ಜಾರನ್ನು ಹೋಲುವ ರೀತಿ ಇದ್ದಾರೆ. 'ಪೊಗರು' ಸಿನಿಮಾದಲ್ಲಿ ನಾಯಕ ನಟ ಧ್ರುವ ಸರ್ಜಾ ಅವರು ಬಿಟ್ಟಿರುವ ಗಡ್ಡಧಾರಿಯನ್ನೇ ಈ ಯುವಕ ಹೋಲುತ್ತಾನೆ. ಅಷ್ಟೇ ಅಲ್ಲ ಇವರು ರಾಜ್ಯಾದ್ಯಂತ ಪೊಗರು ಸಿನಿಮಾ ತೆರೆ ಕಾಣೋವರೆಗೂ ಉದ್ದನೆಯ ಗಡ್ಡ ಮಾತ್ರ ತೆಗೆಸೋಲ್ಲ ಎಂಬ ಹರಕೆಯನ್ನು ಹೊತ್ತಿದ್ದಾರಂತೆ.

ಗಣಿನಗರಿಯಲ್ಲೊಬ್ಬ ಮಿ‌ನಿ ಧ್ರುವಸರ್ಜಾ

ಬಳ್ಳಾರಿ:ನಟ ಧ್ರುವಸರ್ಜಾ ಥರಾನೇ ಇರುವ ಮಿನಿ ಧ್ರುವಸರ್ಜಾರೊಬ್ಬರು ಗಣಿನಾಡಿನಲ್ಲಿದ್ದಾರೆ. 'ಪೊಗರು' ಸಿನಿಮಾದಲ್ಲಿ ನಾಯಕನಟ ಧ್ರುವಸರ್ಜಾ ಅವರು ಬಿಟ್ಟಿರುವ ಗಡ್ಡಧಾರಿಯನ್ನೇ ಈ ಯುವಕ ಹೋಲುತ್ತಾನೆ. ರಾಜ್ಯಾದ್ಯಂತ ಪೊಗರು ಸಿನಿಮಾ ತೆರೆ ಕಾಣೋವರೆಗೂ ಉದ್ದನೆಯ ಗಡ್ಡ ಮಾತ್ರ ತೆಗೆಸೋಲ್ಲ ಎಂಬ ಹರಕೆಯನ್ನು ಇವರು ಹೊತ್ತಿದ್ದಾರಂತೆ.

ಬಳ್ಳಾರಿಯ ನಿವಾಸಿ ಎಂ.ಜಿ. ಕನಕ ಅವರೇ ಧ್ರುವ ಸರ್ಜಾರನ್ನು ಹೋಲುವ ವ್ಯಕ್ತಿ. ಸತತ ಒಂಭತ್ತು ತಿಂಗಳ ಕಾಲ ಈ ಗಡ್ಡವನ್ನು ಬೆಳೆಸಿಕೊಂಡು ಬರುತ್ತಿದ್ದಾರಂತೆ ಕನಕ. 'ಪೊಗರು' ಸಿನಿಮಾವನ್ನು ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆ ಉಕ್ಕು ಕೈಗಾರಿಕಾ ಕಾರ್ಖಾನೆ ಒಳಗಡೆ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣ ನಡೆದಿತ್ತು. ಚಿತ್ರದ ಕೊನೆಯಲ್ಲಿ ಬರುವ ಫೈಟಿಂಗ್ ದೃಶ್ಯದಲ್ಲಿ ಸಹ ಕಳನಾಯಕ ನಟನಾಗಿ ಕನಕ ನಟಿಸಿದ್ದಾರೆ.

ಗಣಿನಗರಿಯಲ್ಲೊಬ್ಬ ಮಿ‌ನಿ ಧ್ರುವಸರ್ಜಾ

ಆದರೆ, ಅದು ಯಾವ ಕಾರಣಕ್ಕೆ ಫೈಟಿಂಗ್ ನಡೆಯುತ್ತೆ ಎಂಬ ಗುಟ್ಟನ್ನು ನೀಡದೇ, ನನ್ನ ಪಾರ್ಟ್ ಮಾಡು ಅಂದಿದ್ದರು. ಪಾರ್ಟ್ ಮಾಡಿದ್ದೆಯಷ್ಟೇ. ಪೊಗರು ಚಿತ್ರದ ಚಿತ್ರೀಕರಣ ಶುರುವಾದ ಕೆಲ ತಿಂಗಳ ಬಳಿಕ ನಾಯಕ ನಟ ಧ್ರುವ ಸರ್ಜಾ ಅವರನ್ನ ಬೆಂಗಳೂರಿನಲ್ಲಿ ಭೇಟಿಯಾಗಿದ್ದೆಯಷ್ಟೇ. ಅವರ ಸರಳತೆ ಹಾಗೂ ಸಮಯಸ್ಪೂರ್ತಿಗೆ ಮಾರುಹೋದೆ ನಾನು. ಅವರನ್ನೇ ಹೋಲುವಂತಹ ಉದ್ದುದ್ದನೆಯ ಗಡ್ಡವನ್ನು ನಾನ್ಯಾಕೆ ಬಿಡಬಾರದು ಅಂತ ಅಂದುಕೊಂಡೇ, ಆಗ ಅವರಂತೆಯೇ ಗಡ್ಡವನ್ನು ಬಿಡಲಾರಂಭಿಸಿದೆ. ಅದನ್ನು ನೋಡಿ ಧ್ರುವ ಸರ್ಜಾ ಅವರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಶಸ್ವಿಯಾಗಿ‌ ತೆರೆಕಾಣಲಿ:

'ಪೊಗರು' ಸಿನಿಮಾದ ಚಿತ್ರೀಕರಣ ಜಿಲ್ಲೆಯ ಜಿಂದಾಲ್ ಉಕ್ಕು ಕಾರ್ಖಾನೆ, ಹಂಪಿ ಹಾಗೂ ಆನೆಗುಂದಿಯಲ್ಲಿ‌ ನಡೆದಿದೆ. ರಾಜ್ಯಾದ್ಯಂತ ‌ಯಶಸ್ವಿಯಾಗಿ ತೆರೆ ಕಾಣಲಿ ಎಂಬ ಉದ್ದೇಶದೊಂದಿಗೆ ಈ ಗಡ್ಡವನ್ನು ಬಿಟ್ಟಿರುವೆ ಎಂದು ಎಂ.ಜಿ.ಕನಕ ಈ ಟಿವಿ ಭಾರತಗೆ ತಿಳಿಸಿದ್ದಾರೆ.

ABOUT THE AUTHOR

...view details