ಬಳ್ಳಾರಿ:ಈ ಹಿಂದೆ ಕೆಪಿಎಸ್ಸಿ ಮುಖೇನ ವೈದ್ಯರ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿತ್ತು. ಈಗ ಅದನ್ನ ಬದಲಾಯಿಸಿ ವೈದ್ಯರ ನೇರ ನೇಮಕ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ದೊರೆಯಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ವೈದ್ಯರ ನೇರ ನೇಮಕಕ್ಕೆ ಶೀಘ್ರ ಕ್ರಮ: ಸಚಿವ ಶ್ರೀರಾಮುಲು ಸ್ಪಷ್ಟನೆ - Minister Sriramulu reaction about Doctors direct recruitment process
ಕೆಪಿಎಸ್ಸಿ ಮೂಲಕ ವೈದ್ಯರ ನೇಮಕಾತಿ ಪ್ರಕ್ರಿಯೆ ವಿಳಂಬ ಆಗುತ್ತಿರೋ ಹಿನ್ನೆಲೆಯಲ್ಲಿ ಈ ನೇರ ನೇಮಕ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ದೊರೆಯಲಿದೆ ಎಂದು ಶ್ರೀರಾಮುಲು ತಿಳಿಸಿದರು.
ಜಿಲ್ಲೆಯ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಪರವಾಗಿ ಮತ ಯಾಚನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯಲ್ಲಿ ಅಂದಾಜು 2,000 ವೈದ್ಯರ ಕೊರತೆಯಿದೆ. ಅದನ್ನ ನೀಗಿಸುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಕೆಪಿಎಸ್ಸಿ ಮೂಲಕ ವೈದ್ಯರ ನೇಮಕಾತಿ ಪ್ರಕ್ರಿಯೆ ವಿಳಂಬ ಆಗುತ್ತಿರೋ ಹಿನ್ನಲೆಯಲ್ಲಿ ಈ ನೇರ ನೇಮಕಾತಿ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗಿದೆ ಎಂದರು.
2009ನೇ ಇಸವಿಯಿಂದಲೂ ಕೂಡ ಗ್ರಾಮೀಣ ಭಾಗದಲ್ಲಿ ಈ ವೈದ್ಯರ ಕಡ್ಡಾಯಗೊಳಿಸಲಾಗಿದೆ. ಆದರೆ, ಕಾನೂನಾತ್ಮಕ ತೊಡಕಿನಿಂದಾಗಿ ಅದು ಈವರೆಗೂ ಜಾರಿಯಾಗಿಲ್ಲ. ಅದಕ್ಕೆ ತಿದ್ದುಪಡಿ ತರುವ ಮುಖಾಂತರ ಗ್ರಾಮೀಣ ಭಾಗದ ಸೇವೆಯನ್ನು ಕಡ್ಡಾಯಗೊಳಿಸುವುದಕ್ಕೆ ಪ್ರಯತ್ನಿಸುವೆ ಎಂದರು.
TAGGED:
Minister Sriramulu news