ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹಾಗೂ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ವಾರ್ಡ್ವಾರು ಪ್ರಚಾರ ನಡೆಸಿದರು.
ನಗರದ ತೇರು ಬೀದಿಯಿಂದ ಪ್ರಚಾರ ಕಾರ್ಯವನ್ನು ಆರಂಭಿಸಿದ ನಾಯಕರು, ಬಾಲಾಂಜನೇಯ ಸ್ವಾಮಿ ದೇಗುಲ, ಕಾರ್ಕಲತೋಟ, ಗುಗ್ಗರಹಟ್ಟಿ ಆಂಜನೇಯ ಸ್ವಾಮಿ ದೇಗುಲ, ಬಳ್ಳಾರೆಪ್ಪ ಕಾಲೊನಿ, ಬಾಪೂಜಿ ನಗರ, ಆಂದ್ರಾಳ್ ರಾಮನಗುಡಿ, ಮರಿಸ್ವಾಮಿ ಮಠ, ಗಣೇಶ ಗುಡಿ ಮುಂದೆ, ಬನ್ನಪ್ಪ ಬಾವಿ, ಕಾಟೇಗುಡ್ಡ, ಶ್ರೀರಾಮ ದೇಗುಲ, ಗೋನಾಳ್, ಪಟೇಲ್ ನಗರ, ವೆಂಕಟೇಶ್ವರ ಗುಡಿ ಸೇರಿದಂತೆ ಇತರೆಡೆ ತೆರಳಿ ಆಕಾಂಕ್ಷಿಗಳ ಪಟ್ಟಿಯನ್ನ ಸ್ವೀಕರಿಸಿದರು.