ಬಳ್ಳಾರಿ:1953ರಲ್ಲಿ ನಿರ್ಮಿಸಿದ ಸೇತುವೆ ಇದಾಗಿದ್ದು ನದಿಗೆ ಇತಿಹಾಸದಲ್ಲಿಯೇ ಅತಿ ಹೆಚ್ಚು ನೀರು ಹರಿದು ಬಂದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು. ತಾಲೂಕಿನ ಬಿ ಡಿ ಹಳ್ಳಿ ಬಳಿಯ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೇಲು ಸೇತುವೆಯ ಎಲ್‍ಎಲ್‍ಸಿ ಕಾಲುವೆಯ ದುರಸ್ತಿ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ನದಿ ಸಹ ಸಾಕಷ್ಟು ಒತ್ತುವರಿಯಾಗಿದೆ. ಕರ್ನಾಟಕ ಮತ್ತು ಆಂಧ್ರ ಗಡಿಭಾಗಕ್ಕೆ ಸಂಪರ್ಕ ಕಲ್ಪಿಸುವ ಹಳೆಯ ಸೇತುವೆಯಲ್ಲಿ ಇದಾಗಿದ್ದು, 10ನೇ ಪಿಲ್ಲರ್ ಸಂಪೂರ್ಣ ಡ್ಯಾಮೇಜ್ ಆಗಿದೆ. 15ನೇ ಪಿಲ್ಲರ್ ನದಿಯಲ್ಲಿ ಕೊಚ್ಚಿ ಹೋಗಿದೆ. ಕಳೆದ 23 ದಿನಗಳಿಂದ ಕಾಲುವೆಗೆ ನೀರು ಬಂದಾಗಿದೆ. ನೂತನ ಸೇತುವೆಗೆ 400 ಕೋಟಿ ಅನುದಾನ ಬೇಕು. ಶೇ 70ರಷ್ಟು ಆಂಧ್ರಪ್ರದೇಶ ಸರ್ಕಾರ ಕೊಡಬೇಕು. ಶೇ 40ರಷ್ಟು ಅನುದಾನ ರಾಜ್ಯ ಸರ್ಕಾರ ಕೊಡಬೇಕು ಎಂದರು.
ನೀರು ಬಂದಾಗಿದ್ದರಿಂದ ಎರಡು ರಾಜ್ಯ ಸೇರಿ ಸುಮಾರು 3 ಲಕ್ಷ ಎಕರೆ ಬೆಳೆ ಒಣಗುವ ಸಾಧ್ಯತೆ ಇದೆ. ಮೂರು ದಿನದಲ್ಲಿ ನೀರು ಬಾರದಿದ್ದರೆ ಬೆಳೆ ಸಂಪೂರ್ಣ ಒಣಗಿ ಹೋಗಲಿವೆ. ಇಂದು ನೀರು ಬಿಡುವ ಸಾಧ್ಯತೆ ಇದೆ ಎಂದು ರೈತರಿಗೆ ಅವರು ಅಭಯ ನೀಡಿದರು. ನಾನು ಇಲ್ಲಿ ಓರ್ವ ಜಿಲ್ಲಾ ಮಂತ್ರಿಯಾಗಿ ಬಂದಿದ್ದೇನೆ. ರಾಜಕಾರಣ ಮಾಡುಲು ಇಲ್ಲಿಗೆ ಬಂದಿಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡುವ ಅಗತ್ಯ ಇಲ್ಲವೆಂದು ರಾಜಕೀಯ ಪ್ರೇರಿತ ಹೇಳಿಕೆಗಳಿಗೆ ಅವರು ಇದೇ ವೇಳೆ ಪ್ರತಿಕ್ರಿಯೆ ನೀಡಿದರು.
ಎಲ್‍ಎಲ್‍ಸಿ ಕಾಲುವೆಯ ದುರಸ್ತಿ ಶಾಸಕ ಬಿ.ನಾಗೇಂದ್ರ ಪರಿಶೀಲನೆ:ಇದಕ್ಕೂ ಮುನ್ನ ಬೆಳಗ್ಗೆ 4 ಗಂಟೆಗೆ ಪಿಲ್ಲರ್ ದುರಸ್ತಿ ಕಾಮಗಾರಿ ಪ್ರದೇಶಕ್ಕೆ ತೆಳರಳಿದ್ದ ಶಾಸಕ ಬಿ.ನಾಗೇಂದ್ರ ಅದರ ಪರಿಶೀಲನೆ ನಡೆಸಿದರು.
ವಾಣಿ ವಿಲಾಸ ಸಾಗರ ಮತ್ತು ಮಳೆಯ ನೀರಿನಿಂದ ನದಿಗೆ ಹೆಚ್ಚಿನ ನೀರು ಹರಿದ ಪರಿಣಾಮ 58 ಪಿಲ್ಲರ್ಗಳಲ್ಲಿ 15ನೇ ಪಿಲ್ಲರ್ ಕೊಚ್ಚಿಹೋಗಿದೆ. 10ನೇ ಪಿಲ್ಲರ್ ದುರಸ್ತಿಯಾಗಿದೆ. ನೀರಿಗಾಗಿ ಪರಿತಪಿಸುತ್ತಿರುವ ಮೋಕಾ, ಬೆಣಕಲ್ ಸೇರಿದಂತೆ ರಾಜ್ಯದ 13 ಹಳ್ಳಿಗಳಿಗೆ ನೀರು ಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೂರು ದಿನದ ಹಿಂದೆಯೇ ಹೇಳಿದ್ದೆ. ಅಧಿಕಾರಿಗಳು ದುರಸ್ತಿ ನಂತರ ಹಂತ ಹಂತವಾಗಿ ನೀರು ಬಿಡುವುದಾಗಿ ಹೇಳಿದ್ದಾರೆ. ಈಗ ನೀರು ಬಿಡದಿದ್ದರೆ ರೈತರಿಗೆ ಸಾವಿರಾರು ಕೋಟಿ ಹನಿಯಾಗಲಿದೆ ಎಂದು ಅವರಲ್ಲಿ ಮನವರಿಕೆ ಮಾಡಿಕೊಳ್ಳಲಾಗಿದೆ. ನಿರ್ವಹಣೆ ಕೊರತೆಯಿಂದ ಈ ಸಮಸ್ಯೆ ಉಂಟಾಗಿದೆ. ಕಾಲ ಕಾಲಕ್ಕೆ ನಿರ್ಹಹಣೆ ಮಾಡಿದ್ದರೆ ಈ ಸಮಸ್ಯೆಯಾಗುತ್ತಿರಲಿಲ್ಲ. ಇದರಲ್ಲಿ ರಾಜಕೀಯ ವಿಚಾರ ಇಲ್ಲ ಅವರು ಸ್ಪಷ್ಟಪಡಿಸಿದರು.
ರೈತರ ಹಿತಕ್ಕಾಗಿ ಬಂದಿದ್ದೇವೆ. ಇಲ್ಲಿ ರಾಜಕೀಯ ಹುಡುಕಾಡಬೇಡಿ. ಕಾಂಗ್ರೆಸ್ ಪಕ್ಷವು ರೈತರ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ನೀರು ಬಿಡಿಸುವುದು ನಮ್ಮ ಮೊದಲ ಕರ್ತವ್ಯ ಎಂದರು.
ಆಂಧ್ರದ ಸಚಿವ ಗುಮ್ಮನೂರು ಜಯರಾಂ ಹೇಳಿಕೆ: ಹೊಸ ಸೇತುವೆ ನಿರ್ಮಾಣಕ್ಕೆ ಆಂಧ್ರ ಸರ್ಕಾರ ಬದ್ಧವಾಗಿದೆ. ನಮ್ಮ ಪಾಲಿನ ಅನುದಾನ ನೀಡಲು ನಾವು ಸಿದ್ದವಿದ್ದೇವೆ. ನಮ್ಮ ಸರ್ಕಾರ ರೈತರ ಪರವಾದ ನಿಲುವನ್ನು ತೆಗೆದುಕೊಳ್ಳಲು ಸದಾ ಸಿದ್ಧ. ನಮ್ಮ ಸಿಎಂ ಜೊತೆಗೆ ಮಾತನಾಡಿ ಅನುದಾನ ಬಿಡುಗಡೆಗೆ ಮಾಡುತ್ತೇವೆ. ನಾವು ಹೊಸ ಸೇತುವೆ ಸಿದ್ಧ ಇದ್ದೇವೆ. ಇದಕ್ಕೆ ನಮ್ಮ ಸಿಎಂ ಸ್ಪಂದಿಸುತ್ತಾರೆ ಎಂದು ಆಂಧ್ರದ ಸಚಿವ ಗುಮ್ಮನೂರು ಜಯರಾಂ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ, ಆದೋನಿ ಶಾಸಕ ಸಾಯಿ ಪ್ರಸಾದ ರೆಡ್ಡಿ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ:ವೇದಾವತಿ ನದಿ ಬಳಿಯೇ ಹಾಸಿಗೆ ಹಾಸಿಕೊಂಡು ಮಲಗಿದ ಸಚಿವ ಶ್ರೀರಾಮುಲು