ಕರ್ನಾಟಕ

karnataka

By

Published : Jan 24, 2021, 5:42 PM IST

ETV Bharat / state

ಮೊಟ್ಟೆ ವಿತರಣೆಗೆ ವಿಭಾಗವಾರು ಟೆಂಡರ್ ಕರೆಯುವ ಆಲೋಚನೆ ಇದೆ : ಸಚಿವೆ ಜೊಲ್ಲೆ

ಕೊರೊನಾ ಹಿನ್ನೆಲೆ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಆಹಾರವನ್ನು ಮನೆಯಲ್ಲಿ‌‌ ನೀಡಲಾಗುತ್ತಿತ್ತು. ಅಲ್ಲದೇ, ಮಕ್ಕಳ ಆರೋಗ್ಯ ಪರೀಕ್ಷೆ ಮಾಡುವುದನ್ನು ನಿಲ್ಲಿಸಲಾಗಿತ್ತು. ಅದನ್ನು ಪ್ರಾರಂಭ ಮಾಡಲಾಗುವುದು..

ಸಚಿವೆ ಜೊಲ್ಲೆ
ಸಚಿವೆ ಜೊಲ್ಲೆ

ಹೊಸಪೇಟೆ :ಮೊಟ್ಟೆ ವಿತರಣೆಗಾಗಿ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಕಿಯರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಬಳಿಕ ಅವರು ಮಕ್ಕಳಿಗೆ ಮೊಟ್ಟೆ ನೀಡಲಿದ್ದಾರೆ. ಕೆಲ ನ್ಯೂನ್ಯತೆಗಳಿವೆ. ಅವುಗಳನ್ನು ಸರಿಪಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಖಾತೆಯ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ

ಇಲ್ಲಿನ 29ನೇ ವಾರ್ಡಿನ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಬಳಿಕ ಮಾತನಾಡಿದ ಅವರು, ಮೊಟ್ಟೆ ವಿತರಣೆಯಿಂದ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹೊರೆ ಬೀಳುತ್ತಿದೆ.

ಇದನ್ನು ತಪ್ಪಿಸಲು ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ಮಾಡಲಾಗಿದೆ. ಮೊಟ್ಟೆ ವಿತರಣೆಯನ್ನು ವಿಭಾಗವಾರು ಟೆಂಡರ್ ಕರೆದು, ತಾಲೂಕು ಪಂಚಾಯತ್‌ನಿಂದ ದುಡ್ಡುನ್ನು ಬಿಡುಗಡೆ ಮಾಡಿಸುವ ಆಲೋಚನೆ ಇದೆ. ಯಾರಿಗೂ ಹೊರೆ ಆಗಬಾರದು ಎಂದರು.

ಕೊರೊನಾ ಹಿನ್ನೆಲೆ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಆಹಾರವನ್ನು ಮನೆಯಲ್ಲಿ‌‌ ನೀಡಲಾಗುತ್ತಿತ್ತು. ಅಲ್ಲದೇ, ಮಕ್ಕಳ ಆರೋಗ್ಯ ಪರೀಕ್ಷೆ ಮಾಡುವುದನ್ನು ನಿಲ್ಲಿಸಲಾಗಿತ್ತು. ಅದನ್ನು ಪ್ರಾರಂಭ ಮಾಡಲಾಗುವುದು. ಬಳ್ಳಾರಿ, ಯಾದಗಿರಿ, ರಾಯಚೂರು, ಬೀದರ್, ಕಲಬುರ್ಗಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪೌಷ್ಠಿಕ ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ, ಆಯಾ ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.‌

For All Latest Updates

TAGGED:

ABOUT THE AUTHOR

...view details