ಕರ್ನಾಟಕ

karnataka

ETV Bharat / state

ನರೇಗಾ ಯೋಜನೆಯ 959 ಕೋಟಿ ರೂ ಬಾಕಿ ಮೊತ್ತವನ್ನು ಕೇಂದ್ರ ಬಿಡುಗಡೆ ಮಾಡಿದೆ: ಈಶ್ವರಪ್ಪ - ಬಳ್ಳಾರಿಯಲ್ಲಿ ಸಚಿವ ಕೆ.ಎಸ್​​. ಈಶ್ವರಪ್ಪ ಸುದ್ದಿಗೋಷ್ಠಿ

ನರೇಗಾ ಯೋಜನೆಯಲ್ಲಿ ಬಾಕಿ ಇದ್ದ ಒಟ್ಟು 959 ಕೋಟಿ ರೂಪಾಯಿ ಹಣದ ಜೊತೆ ಹೆಚ್ಚುವರಿಯಾಗಿ 117 ಕೋಟಿ ರೂ.ಯನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ ಎಂದು ಸಚಿವ ಕೆ.ಎಸ್​​.ಈಶ್ವರಪ್ಪ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಸಚಿವ ಕೆ.ಎಸ್​​. ಈಶ್ವರಪ್ಪ ಸುದ್ದಿಗೋಷ್ಠಿ
ಬಳ್ಳಾರಿಯಲ್ಲಿ ಸಚಿವ ಕೆ.ಎಸ್​​. ಈಶ್ವರಪ್ಪ ಸುದ್ದಿಗೋಷ್ಠಿ

By

Published : Sep 12, 2021, 3:23 PM IST

ಬಳ್ಳಾರಿ:ನರೇಗಾ ಯೋಜನೆಯ ಬಾಕಿ ಮೊತ್ತವನ್ನು ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್​​.ಈಶ್ವರಪ್ಪ ತಿಳಿಸಿದರು.

ಬಳ್ಳಾರಿಯಲ್ಲಿ ಸಚಿವ ಕೆ.ಎಸ್​​.ಈಶ್ವರಪ್ಪ ಸುದ್ದಿಗೋಷ್ಠಿ

ನಗರದಲ್ಲಿಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‌ಒಟ್ಟು ಬಾಕಿ ಇದ್ದ 959 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ. ದೆಹಲಿಯಲ್ಲಿ ಕೆಂದ್ರ ಸಚಿವ ಗಿರಿರಾಜ್ ಸಿಂಗ್ ಅವರನ್ನು ಭೇಟಿ ಮಾಡಿ, ಬಾಕಿ ಹಣ ಬಿಡುಗಡೆ ಮಾಡುವಂತೆ ಕೇಳಿದ್ದೆ. ಅವರು ಈ ಬಾಕಿ ಮೊತ್ತದ ಜೊತೆಗೆ 117 ಕೋಟಿ ರೂ ಹೆಚ್ಚುವರಿಯಾಗಿ ಬಿಡುಗಡೆ ಮಾಡಿದ್ದಾರೆ ಎಂದರು.

13 ಕೋಟಿ ಮಾನವ ದಿನಗಳನ್ನು ಕೇಂದ್ರ ಸರ್ಕಾರ ನಮಗೆ ಗುರಿಯಾಗಿ ಕೊಟ್ಟಿತ್ತು. ಇದನ್ನು ನಾವು ಸೆಪ್ಟೆಂಬರ್​​ಗೆ ಪೂರ್ಣ ಮಾಡಿದ್ದೇವೆ. ಇದು ದೇಶದಲ್ಲೇ ಒಂದು ದೊಡ್ಡ ಸಾಧನೆ. ಮತ್ತೆ ದೆಹಲಿಗೆ ಹೋಗಿ ಕನಿಷ್ಠ ಇಪ್ಪತ್ತು ಕೋಟಿ ಮಾನವ ದಿನಗಳನ್ನು ನೀಡುವಂತೆ ಮನವಿ ಮಾಡುವೆ ಎಂದು ಹೇಳಿದರು.

ಇದೇ ವೇಳೆ, ರಾಜ್ಯದಲ್ಲಿರುವ 28 ಸಾವಿರ ಕೆರೆಗಳನ್ನು ಜಿಲ್ಲಾ ಪಂಚಾಯಿತಿಯಿಂದ ಗ್ರಾ.ಪಂಗೆ ಹಸ್ತಾಂತರಿಸಿ ಅಭಿವೃದ್ದಿ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವು ಸೋತಿಲ್ಲ, ಪಕ್ಷಕ್ಕೆ ಹಿನ್ನಡೆಯಾಗಿದೆ: ಡಿಕೆಶಿ

ABOUT THE AUTHOR

...view details