ಕರ್ನಾಟಕ

karnataka

ETV Bharat / state

'ಗೋಮಾಂಸ ತಿನ್ನುತ್ತೇನೆ ಎನ್ನುವ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು'

ಗೋ‌ವಿನ ಮಾಂಸವನ್ನು ತಿನ್ನುತ್ತೇವೆ ಎಂದು ಹೇಳುವ, ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು ಎಂದು ಸಚಿವ ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.

Minister Jagadish Shettar
ಸಚಿವ ಜಗದೀಶ ಶೆಟ್ಟರ್

By

Published : Jan 13, 2021, 4:08 PM IST

ಹೊಸಪೇಟೆ/ಬಳ್ಳಾರಿ: ನೂರಾರು ಕೋಟಿ ಹಿಂದೂಗಳು ಗೋವುಗಳನ್ನು ಪೂಜನೀಯ ಭಾವದಿಂದ ನೋಡುತ್ತಾರೆ. ಅಂತಹ ಗೋ‌ವಿನ ಮಾಂಸವನ್ನು ತಿನ್ನುತ್ತೇವೆ ಎಂದು ಹೇಳುವ ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಖಾಸಗಿ ಹೋಟೆಲ್​​ನಲ್ಲಿ ಹಮ್ಮಿಕೊಂಡಿದ್ದ ಜನಸೇವಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಒಡೆದು ಹೋಗುತ್ತಿದ್ದು, ಹೀಗಾಗಿ ಅವರಿಗೆ ಸಮಾಜದ ಬಗ್ಗೆ ಕಾಳಜಿಯಿಲ್ಲ ಎಂದರು.

ಸಚಿವ ಜಗದೀಶ ಶೆಟ್ಟರ್ ಮಾತು

ಸಿದ್ದರಾಮಯ್ಯ ಅವರು ಗೋಮಾಂಸ ತಿನ್ನುತ್ತೇನೆ ಎನ್ನುತ್ತಿದ್ದಾರೆ. ಗೋವಿನ ಮಾಂಸ ತಿನ್ನಲು, ಅದನ್ನು ಕೊಲ್ಲಬೇಕಾಗುತ್ತದೆ.‌ ಹಾಗಾಗಿ‌ ಅವರು ಸಹ ಅಪರಾಧಿ ಆಗುತ್ತಾರೆ. ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತು ಗೋ ಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಬಿಲ್​​ನ್ನು ಪಾಸ್ ಮಾಡೋಣ ಎಂದು ಹೇಳಿದರು..

ABOUT THE AUTHOR

...view details