ಕರ್ನಾಟಕ

karnataka

ETV Bharat / state

ಉಜ್ಜಯಿನಿ ಪೀಠಕ್ಕೆ ಈಶ್ವರಪ್ಪ ಭೇಟಿ: ಶ್ರೀಗಳಿಂದ ಆಶೀರ್ವಾದ - Minister Eshwarappa visits Ujjaini Peetha in Bellary

ಕೊಟ್ಟೂರು ತಾಲೂಕಿನ ಬಿಜೆಪಿ ಕಾರ್ಯಕರ್ತರು ಹಾಗೂ ಭಕ್ತರೊಂದಿಗೆ ಸಚಿವ ಈಶ್ವರಪ್ಪ ಅವರು ಉಜ್ಜಯಿನಿ ಪೀಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದರು.

ಉಜ್ಜನಿ ಪೀಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದ ಸಚಿವ ಈಶ್ವರಪ್ಪ
ಉಜ್ಜನಿ ಪೀಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದ ಸಚಿವ ಈಶ್ವರಪ್ಪ

By

Published : Jan 5, 2021, 12:06 PM IST

ಬಳ್ಳಾರಿ: ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಯಿನಿ ಪೀಠಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು.

ಕೊಟ್ಟೂರು ತಾಲೂಕಿನ ಬಿಜೆಪಿ ಕಾರ್ಯಕರ್ತರು ಹಾಗೂ ಉಜ್ಜಯಿನಿ ಪೀಠದ ಭಕ್ತರೊಂದಿಗೆ ಭೇಟಿ ನೀಡಿದ ಸಚಿವ ಈಶ್ವರಪ್ಪ, ಪೀಠಾಧಿಪತಿಗಳಾದ ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಸನ್ಮಾನ ಸ್ವೀಕರಿಸಿ ಆರ್ಶೀವಾದ ಪಡೆದರು.

ಇದನ್ನೂ ಓದಿ: ದೈವಸ್ಥಾನದ ಹುಂಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಚ್ಯುತಿ ತರುವ ಬರಹ: ಬಿಷಪ್ ಖಂಡನೆ

ಸಚಿವ ಈಶ್ವರಪ್ಪ ಅವರಿಗೆ ಮೈಸೂರು ಪೇಟ ತೊಡಿಸಿ ಸ್ವಾಮೀಜಿ ಆಶೀರ್ವದಿಸಿದರು. ಬಾಳೆ ಹೊನ್ನೂರಿನ ರಂಭಾಪುರಿ ಪೀಠಾಧಿಪತಿಗಳು ಉಜ್ಜಯಿನಿ ಪೀಠಕ್ಕೆ ಮತ್ತೋರ್ವ ಸ್ವಾಮೀಜಿ ಅವರನ್ನ ನೇಮಕಗೊಳಿಸಿದ್ದರು.‌ ಅದರ ಬೆನ್ನಲ್ಲೇ ಸಚಿವರಾದ ಶ್ರೀರಾಮುಲು ಹಾಗೂ ಈಶ್ವರಪ್ಪ ಭೇಟಿ ನೀಡಿರುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ ಎನ್ನಲಾಗುತ್ತಿದೆ.

ABOUT THE AUTHOR

...view details