ಬಳ್ಳಾರಿ:ಜಿಲ್ಲೆಯ ಗಾಂಧಿನಗರದಲ್ಲಿರುವ ವೀರಶೈವ ವಿದ್ಯಾವರ್ಧಕ ಸಂಘದ ಕಚೇರಿಗೆ ಇಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ.ಪಾಟೀಲ್ ಭೇಟಿ ನೀಡಿದರು.
ನಗರದ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಏಕತಾ ಅಭಿಯಾನದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವರು ಕೆಳಮಹಡಿಯಲ್ಲಿರುವ ಸಂಘದ ಕಚೇರಿಗೆ ಭೇಟಿ ನೀಡಿದರು. ಕೆಲಕಾಲ ಅಧ್ಯಕ್ಷರು ಮತ್ತು ಸದಸ್ಯರ ಜೊತೆ ಚರ್ಚೆ ನಡೆಸಿ ಬಳಿಕ ಮಾತನಾಡಿದ ಅವರು, ಅಖಂಡ ಭಾರತದ ಕನಸು ಕಂಡು ಮೋದಿ, ಅಮಿತ್ ಶಾ ಅವರು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ದೇಶಕ್ಕೆ ಒಂದೇ ಕಾನೂನು, ಒಂದೇ ಧ್ವಜ, ಎಲ್ಲರು ಭಾರತೀಯರು ಎಂಬಂತಹ ದಿಟ್ಟ ನಿರ್ಧಾರವನ್ನು ತೆಗೆದುಕೊಂಡರು. ಆ ನಿರ್ಣಯವನ್ನು ಜಿಲ್ಲಾ ಮಟ್ಟದಲ್ಲಿ ಯಶ್ವಸಿಯಾಗಿ ಜಾರಿಗೆ ತರುವಲ್ಲಿ ಶ್ರಮಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರು.
ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ.ಪಾಟೀಲ್ ಗಣಿ ಜಿಲ್ಲೆಯ ಇಬ್ಬಾಗದ ಪ್ರತಿಕ್ರಿಯೆಗೆ ಸಚಿವ ಪಾಟೀಲ್ ನಕಾರ:
ಪ್ರತ್ಯೇಕ ವಿಜಯ ನಗರ ಜಿಲ್ಲೆಯನ್ನಾಗಿಸುವ ಕೂಗಿಗೆ ನಿಮ್ಮ ನಿಲುವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ನನಗಂತೂ ಗೊತ್ತಿಲ್ಲ. ಆ ವಿಚಾರವಾಗಿ ನಾನೇನು ಪ್ರತಿಕ್ರಿಯಿಸೋಲ್ಲ. ಸಚಿವ ಸಂಪುಟ ಸಭೆಯಲ್ಲಿ ನನ್ನ ಅಭಿಪ್ರಾಯ ತಿಳಿಸಿವೆ. ಅದನ್ನು ಬಹಿರಂಗಪಡಿ ಸೋಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಅನುದಾನವೇ ಅಗತ್ಯವೇನಿಲ್ಲ ಎಂಬುದರ ಕುರಿತು ಸಂಸದ ಸೂರ್ಯ ತೇಜಸ್ವಿ ಹೇಳಿಕೆಗೆ ನಾನೇನು ಪ್ರತಿಕ್ರಿಯಿಸಲ್ಲ. ಅವರೇನು ಹೇಳಿಕೆ ಕೊಟ್ಟಿದ್ದಾರೆಯೋ ನನಗಂತೂ ಗೊತ್ತಿಲ್ಲ. ಈಗಾಗಲೇ ರಾಜ್ಯ ಸರ್ಕಾರ ನೆರೆ ಪ್ರವಾಹ ಪೀಡಿತ ಜನರಿಗೆ ಸೌಕರ್ಯ ಒದಗಿಸುತ್ತದೆ. ಸಚಿವ ಸಂಪುಟ ಸಭೆಯಲ್ಲಿ ಸಾವಿರ ಕೋಟಿ ಮನೆಗಳ ದುರಸ್ತಿಗೆ ಹಾಗೂ ಐನೂರು ಕೋಟಿ ರೂಗಳನ್ನು ರಸ್ತೆ ಅಭಿವೃದ್ಧಿಗೆ ನೀಡಲಾಗಿದೆ. ಕೇಂದ್ರ ಸರ್ಕಾರ ಆದಷ್ಟು ಬೇಗ ಇನಷ್ಟು ಪರಿಹಾರ ಮೊತ್ತ ನೀಡಲಿದೆ ಎಂದರು.
ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ.ಪಾಟೀಲ್ ಇನ್ನು ಈ ಕಾರ್ಯಕ್ರಮಲದಲ್ಲಿ ವಿಶ್ವಗುರು ಬಸವೇಶ್ವರ ಕಂಚಿನ ಪುತ್ಥಳಿಯನ್ನು ಸಚಿವ ಪಾಟೀಲ್ ಅವರಿಗೆ ನೀಡಿ ಸನ್ಮಾನಿಸಿದರು. ಅಲ್ಲದೆ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಹಾಗೂ ಸಂಸದ ವೈ.ದೇವೇಂದ್ರಪ್ಪ ಅವರನ್ನೂ ಕೂಡ ಇದೇ ವೇಳೆ ಸನ್ಮಾನಿಸಲಾಯಿತು. ಈ ವೇಳೆ ಬಿಜೆಪಿ ಅಧ್ಯಕ್ಷ ಎಸ್. ಚನ್ನಬಸವನಗೌಡ, ಶಾಸಕ ರಾಜೀವ ಕುಡಚಿ, ಮುಖಂಡರ ಡಾ.ಮಹಿಪಾಲ, ಎಸ್.ಗುರುಲಿಂಗನ ಗೌಡ, ಮರ್ಚೇಡ್ ಮಲ್ಲಿಕಾರ್ಜುನಗೌಡರು, ಹೆಚ್.ಹನುಮಂತ ಪ್ಪ, ಎಸ್.ಮಲ್ಲನಗೌಡ ಇದ್ದರು.