ಕರ್ನಾಟಕ

karnataka

ETV Bharat / state

ರಾಜೀನಾಮೆಗೆ ಕಾರಣ ಬಿಚ್ಚಿಟ್ಟ ಸಚಿವ ಆನಂದ ಸಿಂಗ್: ವಿಜಯನಗರ ಮರು ಹುಟ್ಟಿಗೆ ಖುಷಿ ಪಟ್ಟ ನಟ ಅಜೇಯ್​ ರಾವ್​​​​​ - ರಾಜೀನಾಮೆ ಕುರಿತು ಸಚಿವ ಆನಂದ ಸಿಂಗ್ ಹೇಳಿಕೆ

ಇವತ್ತು ಏನೇಲ್ಲಾ ಸಂಪಾದನೆ ಮಾಡಿದ್ರೂ, ಹೊತ್ಕೊಂಡು ಹೋಗೋಲ್ಲಾ ಎಂದರು. ಅಲ್ಲದೆ, ಹೋರಾಟಗಾರರಿಗೆ ಇಂದು ಸನ್ಮಾನ ಮಾಡಬೇಕಾಗಿತ್ತು. ಆದರೆ, ಆಗಿಲ್ಲ. ಅವರ ಕಚೇರಿಗೆ ಹೋಗಿ ಸನ್ಮಾನ ಮಾಡಲಾಗುವುದು..

minister-anand-singh-talk-in-vijayanagar-district-inauguration
ಆನಂದ್​ ಸಿಂಗ್​ ಅಜಯ್​ ರಾವ್​

By

Published : Oct 3, 2021, 10:13 PM IST

ಹೊಸಪೇಟೆ (ವಿಜಯನಗರ) :ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ಮೂರು ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಆ ಮೂರು ಬೇಡಿಕೆಗಳ ಪೈಕಿ ವಿಜಯನಗರ ಜಿಲ್ಲೆಯ ರಚನೆ ಪ್ರಮುಖವಾಗಿತ್ತು. ಆದ್ರೆ, ಸಮ್ಮಿಶ್ರ ಸರ್ಕಾರದ ನಾಯಕರು ಮನವಿಗೆ ಸ್ಪಂದಿಸಲಿಲ್ಲ. ಅದಕ್ಕೆ ನಾನು ರಾಜೀನಾಮೆ ಕೊಟ್ಟೆ, ನಂತರ ನನ್ನ ಸ್ನೇಹಿತರು ರಾಜೀನಾಮೆ ಕೊಟ್ಟರು ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು.

ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರೋಪ ಸಮಾರಂಭದಲ್ಲಿ ಸಚಿವ ಆನಂದ್‌ ಸಿಂಗ್‌..

ನಗರದಲ್ಲಿಂದು ನಡೆದ ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಇಂದು ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ನಾವು ಸಚಿವರಾಗಿದ್ದೇವೆ. ರಾಜಕೀಯ ಬರುತ್ತದೆ ಅಥವಾ ಹೋಗುತ್ತದೆ.

ಇವತ್ತು ಏನೇಲ್ಲಾ ಸಂಪಾದನೆ ಮಾಡಿದ್ರೂ, ಹೊತ್ಕೊಂಡು ಹೋಗೋಲ್ಲಾ ಎಂದರು. ಅಲ್ಲದೆ, ಹೋರಾಟಗಾರರಿಗೆ ಇಂದು ಸನ್ಮಾನ ಮಾಡಬೇಕಾಗಿತ್ತು. ಆದರೆ, ಆಗಿಲ್ಲ. ಅವರ ಕಚೇರಿಗೆ ಹೋಗಿ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ವಿಜಯನಗರ ಜಿಲ್ಲೆ ಇತಿಹಾಸ ಸೃಷ್ಟಿಸುತ್ ತೆ: ನಟ ಅಜೇಯ್​ ರಾವ್​

ಚಲನಚಿತ್ರ ನಟ ಅಜೇಯ್ ರಾವ್ ಮಾತನಾಡಿ, ನನಗೆ ಸಿನಿಮಾ ರಂಗದಲ್ಲಿ ಕೆಲಸ ಕೊಡಿಸಿದ್ದು ಬಿ.ಸಿ ಪಾಟೀಲ್, ಅವರಿಗೆ ಧನ್ಯವಾದಗಳು. ನಾನು ಮೂಲತಃ ಹೊಸಪೇಟೆಯವನು. ಎಂಜೆ ನಗರದ ಮನೆಯಲ್ಲಿ ಹುಟ್ಟಿದ್ದು‌. ನಾನು ವಿಜಯನಗರ ಕಾಲೇಜ್‌ನಲ್ಲಿ ಓದಿದ್ದೇನೆ. ನಮ್ಮೂರು ಇಷ್ಟು ಎತ್ತರಕ್ಕೆ ಬೆಳೆಯುತ್ತಿರೋದು, ನನಗೆ ಹೆಮ್ಮೆ ಇದೆ. ವಿಜಯನಗರ ಜಿಲ್ಲೆ ಇತಿಹಾಸವಾಗುತ್ತದೆ ಎಂದರು.

ABOUT THE AUTHOR

...view details