ಹೊಸಪೇಟೆ: ಖಾತೆಯ ಬದಲಾವಣೆ ಕುರಿತು ಯಾವುದೇ ಅಸಮಾಧಾನವಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಪಾಲಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು.
ಖಾತೆ ಬದಲಾವಣೆ ಕುರಿತು ಯಾವುದೇ ಅಸಮಾಧಾನವಿಲ್ಲ: ಸಚಿವ ಆನಂದ್ ಸಿಂಗ್ ಸ್ಪಷ್ಟನೆ - Minister Anand singh reaction about minister post
12:45 January 25
ಖಾತೆಯ ಬದಲಾವಣೆ ಕುರಿತು ಯಾವುದೇ ಅಸಮಾಧಾನವಿಲ್ಲ. ಸಿಎಂ ಆದೇಶ ಪಾಲಿಸಲಾಗುವುದು ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಬಳಿ ಕಾಮಗಾರಿ ವೀಕ್ಷಣೆಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ಖಾತೆಯ ಬದಲಾವಣೆ ಕುರಿತು ಯಾವುದೇ ಅಸಮಾಧಾನವಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಪಾಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಸದ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ವೀಕ್ಷಿಸಲು ಬಂದಿರುವೆ. ಪದೇ ಪದೆ ಖಾತೆ ಬದಲಾವಣೆ ಕುರಿತು ಮುಖ್ಯಮಂತ್ರಿಗಳನ್ನೇ ಕೇಳಬೇಕು. ನಾಡಿದ್ದು ಬೆಂಗಳೂರಿಗೆ ಹೋಗುವೆ ಎಂದರು.
ಇದನ್ನೂ ಓದಿ : ಮೂವರು ಸಚಿವರ ಖಾತೆ ಮರು ಹಂಚಿಕೆ: ಸುಧಾಕರ್‌ಗೆ ಮತ್ತೆ ವೈದ್ಯಕೀಯ ಶಿಕ್ಷಣ ಖಾತೆ?
ವಿಜಯನಗರ ನೂತನ ಜಿಲ್ಲೆ ಆಗಲಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದರು.