ಹೊಸಪೇಟೆ (ಬಳ್ಳಾರಿ):ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ(ಡಿಎಮ್‍ಎಫ್) ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್‍ಗೆ ನೀಡಿದ್ದ ವಾಹನಗಳಿಗೆ, ಮೂಲ ಸೌಕರ್ಯ ಅಬಿವೃದ್ಧಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆನಂದ್ ಸಿಂಗ್ ಚಾಲನೆ ನೀಡಿದರು.
ಅಟಲ್ ಜೂಲಾಜಿಕಲ್ ಪಾರ್ಕ್‍ಗೆ ಡಿಎಮ್ಎಪ್ನಿಂದ ವಾಹನಗಳ ಕೊಡುಗೆ: ಸಚಿವ ಆನಂದ್ ಸಿಂಗ್ ಚಾಲನೆ - ಜಿಲ್ಲಾ ಖನಿಜ ಪ್ರತಿಷ್ಟಾನ ನಿಧಿ
ಡಿಎಮ್ಎಫ್ನಿಂದ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್‍ಗೆ ಒಟ್ಟು 11 ಕೋಟಿ ರೂ. ಬಿಡುಗಡೆಯಾಗಿದ್ದು, ಅವುಗಳಲ್ಲಿ ನೀಡಿದ್ದ ವಾಹನಗಳಿಗೆ ಸಚಿವ ಆನಂದ್ ಸಿಂಗ್ ಚಾಲನೆ ನೀಡಿದರು.
ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ (ಡಿಎಮ್‍ಎಫ್) ಒಟ್ಟು 11 ಕೋಟಿ ರೂ. ಬಿಡುಗಡೆಯಾಗಿದ್ದು, ಅದರಲ್ಲಿ 5 ಕೋಟಿ ರೂ. ಪ್ರವೇಶ ಮುಖ್ಯದ್ವಾರಕ್ಕಾಗಿ, 5 ಕೋಟಿ ರೂ. ಜೂಲಾಜಿಕಲ್ ಪಾರ್ಕ್‍ನ ರಸ್ತೆಯ ಡಾಂಬರೀಕರಣಕ್ಕಾಗಿ, 1 ಕೋಟಿ ವೆಚ್ಚದಲ್ಲಿ ಮೃಗಾಲಯಕ್ಕೆ 2 ಬಸ್ ಹಾಗೂ 1 ಜೀಪ್, ಮೃಗಾಲಯ ಆಸ್ವತ್ರೆಗೆ ಅವಶ್ಯಕತೆಯಿರುವ ಸ್ಕ್ಯಾನಿಂಗ್ ಮಿಷಿನ್ ಮತ್ತು ಎಕ್ಸ್ ರೇ ಮಿಷಿನ್ ಹಾಗೂ ಇನ್ನೂ ಮುಂತಾದ ಸೌಲಭ್ಯಗಳಿಗೆ ಹಣ ಬಿಡುಗಡೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಉಪವಿಭಾಗ ಸಂರಕ್ಷರಣ ಅಧಿಕಾರಿ ಟಿ. ಸಿದ್ದರಾಮಪ್ಪ, ಬಳ್ಳಾರಿ ಪ್ರಾದೇಶಿಕಾ ಅಭಿವೃದ್ದಿ ಅಧಿಕಾರಿ ಕಿರಣ್, ಪಟ್ಟಣ ಪಂಚಾಯಿತಿ ಅಧ್ಯಕ್ಷರರಾದ ಅಮಮುಲ್ಲಾ ಖಾನ್ ಇನ್ನಿತರರು ಉಪಸ್ಥಿತರಿದ್ದರು.