ಕರ್ನಾಟಕ

karnataka

ETV Bharat / state

ಸಚಿವ ಆನಂದ್​ ಸಿಂಗ್​ಗೆ ಪಿತೃವಿಯೋಗ: ಅನಾರೋಗ್ಯದಿಂದ ಪೃಥ್ವಿರಾಜ್ ಸಿಂಗ್ ನಿಧನ - ಸಚಿವ ಆನಂದ್​ ಸಿಂಗ್

ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವರ ತಂದೆ ಪೃಥ್ವಿರಾಜ್ ಸಿಂಗ್ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

hosapete
ಪೃಥ್ವಿರಾಜ್ ಸಿಂಗ್ ನಿಧನ

By

Published : Jul 18, 2021, 2:11 PM IST

ಹೊಸಪೇಟೆ (ವಿಜಯನಗರ): ನಗರದ ರಾಣಿಪೇಟೆಯಲ್ಲಿ ಮಧ್ಯಾಹ್ನ 12.30ಕ್ಕೆ ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವರ ತಂದೆ ಪೃಥ್ವಿರಾಜ್ ಸಿಂಗ್ (84) ನಿಧನರಾಗಿದ್ದಾರೆ.

ಪೃಥ್ವಿ ರಾಜ್ ಸಿಂಗ್ ಅವರು ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಹೊಸಪೇಟೆ ರಾಣಿಪೇಟೆಯ ಮನೆಗೆ ಕರೆ ತರಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಮೃತರಿಗೆ ಇಬ್ಬರು ಪತ್ನಿಯರಿದ್ದು, ಮೊದಲನೇ ಪತ್ನಿ ಮೃತಪಟ್ಟಿದ್ದಾರೆ. ಮೊದಲನೇ ಪತ್ನಿಗೆ ಇಬ್ಬರು ಗಂಡು, ಒಬ್ಬ ಪುತ್ರಿ ಇದ್ದಾರೆ. ಎರಡನೇ ಪತ್ನಿಯ ಮಗ ಆನಂದ‌ ಸಿಂಗ್ ಹಾಲಿ ಸಚಿವರಾಗಿದ್ದಾರೆ.

ಪೃಥ್ವಿರಾಜ್ ಸಿಂಗ್ ಅವರ ಕಣ್ಣುಗಳನ್ನು ಆಸ್ಪತ್ರೆಗೆ ದಾನ ಮಾಡಲು ನಿರ್ಧರಿಸಲಾಗಿದೆ. ರಾಣಿಪೇಟೆಯಲ್ಲಿ ಇಂದು ಸಂಜೆ 6ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ABOUT THE AUTHOR

...view details