ಹೊಸಪೇಟೆ:ಅರಣ್ಯ ಖಾತೆ ಸಚಿವ ಆನಂದ ಸಿಂಗ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರು ಹಂಪಿಯ ತುಂಗಭದ್ರಾ ನದಿಯಲ್ಲಿ ಇಂದು ಪವಿತ್ರ ಪುಣ್ಯಸ್ನಾನ ಮಾಡಿದರು.
ಇದನ್ನೂ ಓದಿ: 'ಕಾರ್ತಿಕ್ ಪೂರ್ಣಿಮಾ' ನಿಮಿತ್ತ ಇಂದು ದೇಶದ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಪುಣ್ಯಸ್ನಾನ

ಸಚಿವರಿಬ್ಬರು ತಮ್ಮ ಮಡಿ ಬಟ್ಟೆಗಳೊಂದಿಗೆ ಆಗಮಿಸಿ ಪುಣ್ಯಸ್ನಾನ ಮಾಡಿದರು. ಸ್ನಾನದ ಬಳಿಕ ನದಿ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪುಣ್ಯ ಸ್ನಾನದಲ್ಲಿ ಆನಂದ ಸಿಂಗ್ ಪುತ್ರ ಸಿದ್ಧಾರ್ಥ ಸಿಂಗ್ ಸೇರಿದಂತೆ ಇತರರು ಹಾಜರಿದ್ದರು.
ಬೆಳಗ್ಗೆ ಹಂಪಿಯ ಬಳಿ ತುಂಗ ಭದ್ರಾ ನದಿಯಲ್ಲಿ ಪವಿತ್ರ ಪುಷ್ಕರ ಸ್ನಾನ ಮಾಡಿದ ನಂತರ, ಹಂಪಿಯ ಆದಿ ದೈವ ಶ್ರೀ ವಿರೂಪಾಕ್ಷಸ್ವಾಮಿ ದರ್ಶನ ಪಡೆದು ಪುನೀತನಾಗಿರುವೆ. ಈ ಸಂದರ್ಭದಲ್ಲಿ, ಹಂಪಿ ವಿದ್ಯಾರಣ್ಯ ಮಠದ ಶ್ರೀಗಳಾದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿಯವರ ಆಶೀರ್ವಾದ ಪಡೆಯಲಾಯಿತು. ಸಂಪುಟ ಸಹೋದ್ಯೋಗಿ ಆನಂದ್ ಸಿಂಗ್ ಕೂಡ ಜೊತೆಗಿದ್ದರು ಎಂದು ಸಚಿವ ಶ್ರೀರಾಮುಲು ಟ್ವೀಟ್ ಮಾಡಿಕೊಂಡಿದ್ದಾರೆ.