ಬಳ್ಳಾರಿ: ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ, ಬೇವಿನ ಮರದಲ್ಲಿ ಹಾಲು ಬರುತ್ತಿರುವುದು ಕಂಡು ಬಂದಿದೆ. ಕುತೂಹಲದಿಂದ ನೋಡುತ್ತಿದ್ದ ನೂರಾರು ವಿದ್ಯಾರ್ಥಿಗಳಿಗೆ ಈ ಕುರಿತು, ಉಪನ್ಯಾಸಕ ಡಾ. ಶ್ರೀನಿವಾಸಮೂರ್ತಿ ನಿಜ ಸಂಗತಿಯನ್ನು ತಿಳಿಸಿದ್ದಾರೆ. ಮರದಿಂದ ಬರುತ್ತಿರುವುದು ಹಾಲಲ್ಲ. ಅದು ನೈಸರ್ಗಿಕ ಮರಗಳಲ್ಲಿ ಇರುವ ಪ್ರಕ್ರಿಯೆಯಾಗಿದೆ ಎಂದು ವೈಜ್ಞಾನಿಕ ಕಾರಣ ತಿಳಿಸಿದ್ದಾರೆ.
ಬೇವಿನ ಮರದಲ್ಲಿ ಬಂದ ಹಾಲು... ಜನರಲ್ಲಿ ಗರಿಗೆದರಿದ ಕುತೂಹಲ! - ಬೇವಿನ ಮರದಲ್ಲಿ ಹಾಲು
ಬಳ್ಳಾರಿ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ, ಬೇವಿನ ಮರದಲ್ಲಿ ಹಾಲು ಬರುತ್ತಿರುವುದು ಕಂಡು ಬಂದಿದೆ.
ಬೇವಿನ ಮರದಲ್ಲಿ ಬಂದ ಹಾಲು
ಈ ಕುರಿತಾಗಿ ಮಾತನಾಡಿದ ಅವರು, ವೈಜ್ಞಾನಿಕವಾಗಿ ಬೇವಿನ ಮರದಲ್ಲಿ ಮೂರು ಕಾರಣದಿಂದ ಹಾಲು ಬರುತ್ತದೆ. ಒಂದು ಬೇವಿನ ಮರಕ್ಕೆ 50 ವರ್ಷವಾಗಿದ್ರೇ ಹಾಲು ಬರುತ್ತೆ ಹಾಗೂ ಎರಡು ಕೊಂಬೆಗಳ ಸೇರಿದ ಸ್ಥಳದಲ್ಲಿ ಹಾಲು ಬರುತ್ತದೆ. ಮತ್ತು ವಾತಾವಣರದಲ್ಲಿ ಹೆಚ್ಚು ಬದಲಾವಣೆ ಆದಾಗ, ಈ ರೀತಿಯ ನೈಸರ್ಗಿಕ ಕ್ರಿಯೆಯಾಗಿ ಹಾಲಿನ ರೂಪದ ದ್ರವ ಬರುತ್ತದೆ ಎಂದು ಮಾಹಿತಿ ನೀಡಿದರು. ಈ ಮೂಲಕ ಅಚ್ಚರಿಯಿಂದ ನೋಡುತ್ತಿದ್ದ ವಿದ್ಯಾರ್ಥಿಗಳಿಗೆ ಇದೊಂದು ನೈಸರ್ಗಿಕ ಕ್ರಿಯೆ ಎನ್ನುವುದನ್ನ ಶಿಕ್ಷಕರು ತೋರಿಸಿ ಅವರಲ್ಲಿದ್ದ ಕುತೂಹಲ ತಣಿಸಿದರು.