ಬಳ್ಳಾರಿ :ನಾಗರ ಪಂಚಮಿಯಂದು ಕಲ್ಲಿಗೆ ಅಥವಾ ಹುತ್ತಕ್ಕೆ ಹಾಲು ಹಾಕುವ ಬದಲು ಕೂಡ್ಲಿಗಿ ತಾಲೂಕು ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಮತ್ತು ಪಟ್ಟಣ ಪಂಚಾಯತ್ ಸದಸ್ಯರಾದ ಶಿರಬಿ ಮಂಜು, ಬಡ ಜನರು ಮತ್ತು ರೋಗಿಗಳಿಗೆ ಹಾಲು ಮತ್ತು ಬ್ರೆಡ್ ವಿತರಿಸಿದ್ದಾರೆ.
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಅವರ ಆದೇಶದ ಮೇರೆಗೆ, ಕೂಡ್ಲಿಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಗೂ ರುದ್ರ ಆಶ್ರಮದಲ್ಲಿ ನಾಗರ ಪಂಚಮಿ ಹಬ್ಬದ ಸಮಯದಲ್ಲಿ ಮೌಢ್ಯಕ್ಕೆ ವಿರುದ್ಧವಾಗಿ ಹಾಲನ್ನು ಕಲ್ಲಿಗೆ ಮತ್ತು ಹುತ್ತಕ್ಕೆ ಹಾಕುವ ಬದಲು ಬಡವರು ಹಾಗೂ ರೋಗಿಗಳಿಗೆ ನೀಡಲಾಗಿದೆ.
ಬಡವರಿಗೆ ಹಾಲು, ಬ್ರೆಡ್ ವಿತರಣೆ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಅವರ ಆದೇಶದ ಮೇರೆಗೆ, ಇಂದು ಬಡವರಿಗೆ ಹಾಗೂ ರೋಗಿಗಳಿಗೆ ಬ್ರೆಡ್ ಮತ್ತು ಹಾಲು ವಿತರಣೆ ಮಾಡಿದ್ದೇವೆ ಎಂದು ಎಂದು ಕೂಡ್ಲಿಗಿ ತಾಲೂಕು ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಮತ್ತು ಪಟ್ಟಣ ಪಂಚಾಯತ್ ಸದಸ್ಯರಾದ ಶಿರಬಿ ಮಂಜು ತಿಳಿಸಿದ್ದಾರೆ.
ರೋಗಿಗಳಿಗೆ ಹಾಲು, ಬ್ರೆಡ್ ವಿತರಣೆ ಈ ಸಮಯದಲ್ಲಿ ಕೂಡ್ಲಿಗಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ವಿನಯ್ ಮುದ್ದೆಗೌಡ, ಪಟ್ಟಣ ಪಂಚಾಯತ್ ಸದಸ್ಯ ಸಿರಿಬಿ ಮಂಜುನಾಥ್, ಡಾಣಿ ರಾಘವೇಂದ್ರ, ಸಾಯೋದ್ ಶುಕೂರ್, ಸೂರ್ಯ ಪ್ರಕಾಶ್ ನಾಯಕ್, ಅಕ್ಕಿ ಅಂಜಿನಪ್ಪ, ಟೈಲರ್ ಸುರೇಶ್ ಓಬಣ್ಣ, ವಕೀಲರಾದ ವಿರುಪಾಕ್ಷಿ, ಮಾಳಗಿ ರಾಘವೇಂದ್ರ ಉಪಸ್ಥಿತರಿದ್ದರು.