ಹೊಸಪೇಟೆ:ನಗರದಲ್ಲಿಮಾನಸಿಕ ಅಸ್ವಸ್ಥ, ದಿವ್ಯಾಂಗ ಯುವಕ ಬೆಳಗ್ಗೆಯಿಂದಲೂ ವಿಶಲ್ ಊದುತ್ತಾ ಟ್ರಾಫಿಕ್ ಕಂಟ್ರೋಲ್ ಮಾಡಿದ್ದಾನೆ.
ಪೊಲೀಸರು ಬರಲಿಲ್ಲ ಎಂದು ತಾನೇ ಟ್ರಾಫಿಕ್ ನಿಯಂತ್ರಿಸಿದ ಮಾನಸಿಕ ಅಸ್ವಸ್ಥ! - ಹೊಸಪೇಟೆ ನಗರದ ಅಂಬೇಡ್ಕರ್ ವೃತ್ತ
ಮಾನಸಿಕ ಅಸ್ವಸ್ಥ, ದಿವ್ಯಾಂಗನೊಬ್ಬ ಬೆಳಗ್ಗೆಯಿಂದಲೂ ವಿಶಲ್ ಊದುತ್ತಾ ಟ್ರಾಫಿಕ್ ಕಂಟ್ರೋಲ್ ಮಾಡಿದ್ದಾನೆ.
ನಗರದ ಅಂಬೇಡ್ಕರ್ ವೃತ್ತದ ಸಿಗ್ನಲ್ ಬೋರ್ಡ್ ಬಳಿ ನಿಂತು ವಿಶಲ್ ಊದುತ್ತಾ ಅಡ್ಡಾ ದಿಡ್ಡಿ ಓಡಾಡುವ ವಾಹನಗಳನ್ನು ಕಂಟ್ರೋಲ್ ಮಾಡುತ್ತಿರುವಾತನ ಹೆಸರು ಅನಿಲ್. ಈತ ಮೂಲತಃ ಆಂಧ್ರ ಪ್ರದೇಶದ ಮಧುಗಿರಿ ನಿವಾಸಿ. ದಿವ್ಯಾಂಗನಾಗಿರುವ ಈತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎನ್ನಲಾಗಿದೆ. ವಾಹನಗಳ ಚಾಲಕರಿಗೆ ರಸ್ತೆ ಸಂಚಾರ ನಿಯಮವನ್ನು ಪಾಲಿಸಿ ಎಂದು ಬುದ್ದಿ ಹೇಳುತ್ತಿದ್ದಾನೆ. ಸಂಚಾರ ನಿಯಮದ ಪ್ರಕಾರವೇ ಸೂಚನೆ ನೀಡುತ್ತಿದ್ದಾನೆ. ದ್ವಿಚಕ್ರ ವಾಹನ ಸವಾರಿಗೆ ಹೆಲ್ಮೆಟ್ ಹಾಕಿಕೊಳ್ಳಿ ಎಂದು ತಿಳಿವಳಿಕೆ ನೀಡುತ್ತಿದ್ದಾನೆ.
ಇನ್ನೂ ಈ ಬಗ್ಗೆ ಅನಿಲ್ ಅನ್ನು ಕೇಳಿದ್ರೆ ಆತ, ಪೊಲೀಸರು ಬರಬೇಕಿತ್ತು. ಆದರೆ, ಇನ್ನೂ ಬಂದಿಲ್ಲ. ಹೀಗಾಗಿ ನಾನೇ ಟ್ರಾಫಿಕ್ ಕಂಟ್ರೊಲ್ ಮಾಡುತ್ತಿದ್ದೀನಿ ಎಂದು ಹೇಳಿದ್ದಾನೆ.