ಕರ್ನಾಟಕ

karnataka

ETV Bharat / state

ಗಂಡು ಮಗುವಿಗೆ ಜನ್ಮ ನೀಡಿದ ಮಾನಸಿಕ ಅಸ್ವಸ್ಥ ಅತ್ಯಾಚಾರ ಸಂತ್ರಸ್ತೆ... ರಕ್ಷಿಸಿದ್ದುಯಾರು? - ಬಳ್ಳಾರಿ ಜಿಲ್ಲಾಡಳಿತ

ಬಳ್ಳಾರಿ ಜಿಲ್ಲಾಡಳಿತ ಮಾನಸಿಕ ಅಸ್ವಸ್ಥೆ ಹಾಗೂ ಮಗುವನ್ನ ಸುರಕ್ಷಿತವಾಗಿ ರಕ್ಷಣೆ ಮಾಡೋ ಮುಖೇನ ವಿಶ್ವ ತಾಯಂದಿರ ದಿನದಂದು ತಾಯಿ-ಮಗುವಿನ ಮಹತ್ವವನ್ನ ಜಗತ್ತಿಗೆ ಸಾರಿದ್ದಾರೆ.

By

Published : May 10, 2020, 10:57 AM IST

Updated : May 10, 2020, 11:55 AM IST

ಬಳ್ಳಾರಿ:ಜಿಲ್ಲಾಡಳಿತದ ಸಮಯಪ್ರಜ್ಞೆಯಿಂದ ಮಾನಸಿಕ ಅಸ್ವಸ್ಥ ಗರ್ಭಿಣಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ. ಬೆಂಗಳೂರಿನ ಕೆಸಿ ಜನರಲ್​ ಆಸ್ಪತ್ರೆಯಲ್ಲಿ ಅಸ್ವಸ್ಥೆ ಮುದ್ದಾದ ಗಂಡು ಮಗು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಆರೋಗ್ಯವಾಗಿದ್ದು, ಮಾನಸಿಕ ಆಸ್ವಸ್ಥತೆಯಿಂದ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾಳೆ.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳದೇ ಹೋಗದಿದ್ದರೆ ಮಹಿಳೆ ಹಾಗೂ ಗರ್ಭದಲ್ಲಿದ್ದ ಮಗುವಿಗೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು. ಸಕಾಲದಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಂಡ ಡಿಸಿ ನಕುಲ್, ಮಾನಸಿಕ ಅಸ್ವಸ್ಥ ಮಹಿಳೆ ಹಾಗೂ ಮುಗ್ಧ ಕಂದಮ್ಮನ ರಕ್ಷಣೆಗೆ ಮುಂದಾಗಿ ಮಾನವೀಯತೆ ಮೆರೆದಿದ್ದಾರೆ‌.

ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಕೆ.ಮಹಾಂತೇಶ ಅವರು ಮಹಿಳೆಯನ್ನು ಹೆರಿಗೆ ಸಲುವಾಗಿ ದಾಖಲಿಸಿದ್ದರು. ಮಹಿಳೆಯಲ್ಲಿ ರಕ್ತದ ಕಣಗಳು ಕಡಿಮೆಯಾಗಿರೋದರಿಂದ ಬದುಕುಳಿಯುವುದು ಕಷ್ಟಸಾಧ್ಯ ಎಂಬ ಮಾಹಿತಿಯನ್ನು ವೈದ್ಯರು ನೀಡಿದ್ದರು. ಆಗ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲು ಅಧಿಕಾರಿಗಳು ನಿರ್ಧರಿಸಿದ್ದರು. ಆದರೆ, ಆಕೆಯ ಸಂಬಂಧಿಕರು ತಮಗೆ ಸಂಬಂಧವೇ ಇಲ್ಲದಂತೆ ಕೈಚಲ್ಲಿ ಕುಳಿತಿದ್ದರು.

ಅದನ್ನ‌ ಸೂಕ್ಷ್ಮವಾಗಿ ಮನಗಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಆರ್.ನಾಗರಾಜ ಅವರು, ಜಿಲ್ಲಾಧಿಕಾರಿ ಎಸ್. ಎಸ್.ನಕುಲ್ ಅವರ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಹಿಂದೆ - ಮುಂದೆ ಆಲೋಚನೆ ಮಾಡದೇ ನಾವೇ ಆ ತಾಯಿ ಮಗುವನ್ನ ರಕ್ಷಣೆ ಮಾಡೋಣ ಎಂದ ಜಿಲ್ಲಾಧಿಕಾರಿ ನಕುಲ್, ಕೂಡಲೇ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ರವಾನಿಸುವಂತೆ ಸೂಚನೆ ನೀಡಿದರು. ಅದೃಷ್ಟವಶಾತ್ ನಿನ್ನೆಯ ದಿನ ಮಧ್ಯಾಹ್ನ 12.30ರ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಕೂಡ ಆರೋಗ್ಯವಾಗಿದ್ದು, ತಾಯಿ ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳಬೇಕಿದೆಯಷ್ಟೇ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಆರ್.ನಾಗರಾಜ ಅವರು ಈ‌ ಟಿವಿ ಭಾರತ್ ಗೆ ತಿಳಿಸಿದ್ದಾರೆ.

ಮಾನವೀಯತೆ ಮೆರೆದ ಡಿಸಿ ನಕುಲ್: ಮಾನಸಿಕ ಅಸ್ವಸ್ಥೆ ಹಾಗೂ ಮಗುವನ್ನ ಸುರಕ್ಷಿತವಾಗಿ ರಕ್ಷಣೆ ಮಾಡುವ ಮೂಲಕ ವಿಶ್ವ ತಾಯಂದಿರ ದಿನದಂದು ತಾಯಿ-ಮಗುವಿನ ಮಹತ್ವವನ್ನ‌ ಇಡೀ ಜಗತ್ತಿಗೆ ಸಾರಿದ್ದಾರೆ. ಬಳ್ಳಾರಿ ಡಿಸಿ ನಕುಲ್ ಅವರಿಗೆ ಅಮ್ಮಂದಿರೆಲ್ಲರೂ ಪ್ರೀತಿಪೂರ್ವಕ ಧನ್ಯವಾದಗಳನ್ನ ಅರ್ಪಿಸಿದ್ದಾರೆ‌.

ಹಿನ್ನೆಲೆ: ಮಾನಸಿಕ ಅಸ್ವಸ್ಥೆಯು ಆ ಗ್ರಾಮದಿಂದ ಕೊಟ್ಟೂರು ಪಟ್ಟಣದವರೆಗೂ ಸುಖಾಸುಮ್ಮನೆ ಅಲೆದಾಡುತ್ತಿದ್ದಳು‌‌. ಎಲ್ಲೆಂದರಲ್ಲಿ ವಾಸ ಮಾಡುತ್ತಿದ್ದ ಈಕೆ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದ. ಈಚೆಗೆ ಕೊಟ್ಟೂರು ಪಟ್ಟಣಕ್ಕೆ ಭೇಟಿ ನೀಡಿದ್ದ ಡಿಸಿ ನಕುಲ್ ಅವರಿಗೆ ಆ ಮಹಿಳೆ ಕಣ್ಣಿಗೆ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ರಕ್ಷಣೆ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚನೆ ನೀಡಿದ್ದರು. ಆಕೆಯನ್ನು ರಕ್ಷಣೆ ಮಾಡಿ ಬಳ್ಳಾರಿಯ ಶಾಂತಿ ಧಾಮದಲ್ಲಿರಿಸಲಾಗಿತ್ತು.‌ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಹಿಳೆಯು ಗರ್ಭಿಣಿ ಎಂಬುದು ಖಾತ್ರಿಯಾಗಿತ್ತು. ಈಕೆಗೆ ಈಗಾಗಲೇ ಮದುವೆಯಾಗಿತ್ತು. ಗಂಡ ಆಕೆಯನ್ನ ತೊರೆದಿದ್ದ. ಹೀಗಾಗಿ, ಮಾನಸಿಕವಾಗಿ ಆಸ್ವಸ್ಥೆಯಾಗಿದ್ದಳು ಎಂಬ ಮಾಹಿತಿಯನ್ನು ಡಿಡಿ ನಾಗರಾಜ ತಿಳಿಸಿದ್ದಾರೆ.

Last Updated : May 10, 2020, 11:55 AM IST

ABOUT THE AUTHOR

...view details