ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಮಾನಸಿಕ ಅಶ್ವಸ್ಥನ ಕೊಲೆ ಶಂಕೆ - ಬಳ್ಳಾರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ

ಮಾನಸಿಕವಾಗಿ ಅಶ್ವಸ್ಥನಾಗಿದ್ದ ವ್ಯಕ್ತಿವೋರ್ವನನ್ನು ಬಳ್ಳಾರಿಯ ಸರಳದೇವಿ ಕಾಲೇಜಿನ ಮುಂಭಾಗದ ಬಾಕ್ಸ್ ಚರಂಡಿಯಲ್ಲಿ ಕೊಲೆ ಮಾಡಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.

Mental Illness Murder in Bellary
ಬಳ್ಳಾರಿಯಲ್ಲಿ ಮಾನಸಿಕ ಅಶ್ವಸ್ಥನ ಕೊಲೆ..?

By

Published : Mar 12, 2020, 6:02 PM IST

ಬಳ್ಳಾರಿ: ನಗರದ ಸರಳದೇವಿ ಕಾಲೇಜು ಮುಂಭಾಗದ ಬಾಕ್ಸ್ ಚರಂಡಿಯಲ್ಲಿ, ವ್ಯಕ್ತಿವೋರ್ವನನ್ನು ಕೊಲೆ ಮಾಡಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ನಗರದ ಸತ್ಯನಾರಾಯಣ ಪೇಟೆಯ ನಿವಾಸಿ ಕಾಶಿನಾಥ (43) ಎಂದು ತಿಳಿದು ಬಂದಿದ್ದು, ಈತ ಮಾನಸಿಕ ಅಶ್ವಸ್ಥನಾಗಿದ್ದ ಎಂದು ಹೇಳಲಾಗ್ತಿದೆ.

ಕಳೆದ 8 ವರ್ಷಗಳಿಂದ ಮಾನಸಿಕವಾಗಿ ಅಶ್ವಸ್ಥನಾಗಿದ್ದು, ಸ್ಥಳೀಯ ಜನರೇ ತಿಂಡಿ ಊಟ ಕೊಡುತ್ತಿದ್ದರು. ಮೃತ ವ್ಯಕ್ತಿಗೆ ತಾಯಿ ಮತ್ತು ಅಣ್ಣ ಇದ್ದು, ಅವರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ.

ಬಳ್ಳಾರಿಯಲ್ಲಿ ಮಾನಸಿಕ ಅಶ್ವಸ್ಥನ ಕೊಲೆ ಶಂಕೆ

ಕೊಲೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ಹೆಚ್ಚುವರಿ ಎಸ್​​​​ಪಿ ಲಾವಣ್ಯ ಮತ್ತು ನಗರದ ಡಿವೈಎಸ್​​ಪಿ ಕೆ. ರಾಮರಾವ್, ಸಿಪಿಐ ಕೆ. ಗಾಯತ್ರಿ ಭೇಟಿ ನೀಡಿದ್ದರು. ಡಿ.ಎ.ಆರ್ ಶ್ವಾನದಳ ಬ್ರೂನಾ (ಡಾಬರ್ ಮೆನ್ ) ತಳಿಯ ಶ್ವಾನವನ್ನು ತರಿಸಿ ಪರಿಶೀಲನೆ ನಡೆಸಲಾಗಿದೆ. ಈ ಕುರಿತು ಗಾಂಧಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details