ಬಳ್ಳಾರಿ:ಬಕ್ರೀದ್ ಹಬ್ಬ ಮುಸ್ಲಿಂ ಬಾಂಧವರಿಗೆ ಶ್ರದ್ಧಾ-ಭಕ್ತಿ ಮತ್ತು ತ್ಯಾಗ ಬಲಿದಾನದ ಸಂಕೇತವಾಗಿದೆ. ಅದೇ ರೀತಿಯಲ್ಲಿ ಗಣಿನಾಡಿನಲ್ಲಿ ಗ್ರಾಮೀಣ ಪ್ರದೇಶದ ಕೌಲ್ ಬಜಾರ್ ಪ್ರದೇಶದಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಉಚಿತವಾಗಿ ಮಾಂಸದಾನ ಮಾಡುವ ಮೂಲಕ ಆಚರಣೆ ಮಾಡಿದರು.
ಗಣಿನಾಡಲ್ಲಿ ಸಂಭ್ರಮದ ಬಕ್ರೀದ್ - ಬಳ್ಳಾರಿ
ಬಳ್ಳಾರಿಯ ಗ್ರಾಮೀಣ ಪ್ರದೇಶದ ಕೌಲ್ ಬಜಾರ್ ಪ್ರದೇಶದಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಉಚಿತವಾಗಿ ಮಾಂಸದಾನ ಮಾಡುವ ಮೂಲಕ ಆಚರಣೆ ಮಾಡಿದರು.
![ಗಣಿನಾಡಲ್ಲಿ ಸಂಭ್ರಮದ ಬಕ್ರೀದ್](https://etvbharatimages.akamaized.net/etvbharat/prod-images/768-512-4117164-thumbnail-3x2-vid.jpg)
ನಗರದ ಕೌಲ್ ಬಜಾರ್ನ ನಿವಾಸಿ ಶೇಕ್ ಮಹಮ್ಮದ್ ಖಾಸಿಂ ಈಟಿವಿ ಭಾರತದೊಂದಿಗೆ ಮಾತನಾಡಿ, ಇಂದು ಬಕ್ರೀದ್ ಇರುವ ಕಾರಣ ಕೆಲವರು ಬೆಳಿಗ್ಗೆ ಸ್ನಾನ ಮಾಡಿದ ನಂತರ ಒಪ್ಪತ್ತಿನಿಂದ ಸಾಮೂಹಿಕವಾಗಿ ನಮಾಜ್ ಮಾಡಿ, ಮನೆಗಳಲ್ಲಿ ಬಂದು ಕುರಿಗಳನ್ನು ಕೊಯ್ದು ನಂತರ ಸಂಬಂಧಿಕರಿಗೆ ಮತ್ತು ಅಕ್ಕಪಕ್ಕದ ಮನೆಗಳಿಗೆ, ಬಡ ಮತ್ತು ಮಧ್ಯಮ ವರ್ಗದವರಿಗೆ, ಮನೆಯ ಹತ್ತಿರ ಬಂದು ಕೇಳಿದ ಜನರಿಗೂ ಸಹ ಮಾಂಸವನ್ನು ದಾನವಾಗಿ ನೀಡುತ್ತಾರೆ ಎಂದು ಹೇಳಿದರು.
ಬಕ್ರೀದ್ ಹಬ್ಬ ಒಂದು ದಿನ ನಡೆದರೆ ಮಾಂಸದಾನ ಮೂರು ದಿನಗಳ ಕಾಲ ನಡೆಯುತ್ತದೆ ಎಂದು ಹಿರಿಯ ಮುಸ್ಲಿಂ ಬಾಂಧವರು ಹೇಳಿದರು. ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರು ಮತ್ತು ಇತರರು ಹೆಚ್ಚು ಜೀವನಾವಶ್ಯಕವಾಗಿ ದಾನ, ಧರ್ಮಗಳನ್ನು ಮಾಡುತ್ತಾರೆ. ಕುರಿ ಚರ್ಮ ದಾನ ಮಾಡಲಾಗುತ್ತದೆ. ಅನಾಥಾಶ್ರಮಗಳಿಗೆ ಹಣದ ಬದಲಿಗೆ ಬಲಿ ನೀಡಿದ ಕುರಿಮರಿಗಳ ಚರ್ಮಗಳನ್ನು ನೀಡುತ್ತಾರೆ. ಅವರು ಆ ಚರ್ಮಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಮುಸ್ಲಿಂ ಆಶ್ರಮದಲ್ಲಿನ ಮಕ್ಕಳಿಗೆ ಬಳಸಿಕೊಳ್ಳುತ್ತಾರೆ ಎಂದು ತಿಳಿಸಿದರು.