ಕರ್ನಾಟಕ

karnataka

ETV Bharat / state

ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ! - ಬಳ್ಳಾರಿ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣ

ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿ ಶ್ರೇಯಸ್ ಆತ್ಮಹತ್ಯೆಗೆ ಶರಣಾಗುವ ಮುನ್ನ ತನ್ನ ಅಕ್ಕ ಶ್ರದ್ದಾಗೆ ಕರೆ ಮಾಡಿರುವುದಾಗಿ ಗೊತ್ತಾಗಿದೆ. ಹಾಸ್ಟೆಲ್​​ನಲ್ಲಿದ್ದ ವಿದ್ಯಾರ್ಥಿ ಹಾಗೂ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು ,ಪರಿಶೀಲನೆ ನಡೆಸಿದರು.

MBBS student suicide in Bellary
MBBS student suicide in Bellary

By

Published : May 7, 2022, 4:03 PM IST

ಬಳ್ಳಾರಿ:ನಗರದ ವಿಮ್ಸ್​​ ಹಾಸ್ಟೆಲ್​​ನಲ್ಲಿ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಎಂಬಿಬಿಎಸ್ ಕೋರ್ಸ್​ನ ಕೊನೆಯ ವರ್ಷದದಲ್ಲಿ ವ್ಯಾಸಂಗ ಮಾಡುತಿದ್ದ ಶ್ರೇಯಸ್ ಜೋಶಿ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎಂದು ತಿಳಿದು ಬಂದಿದೆ. ಹಾಸ್ಟೆಲ್​​ನ ತನ್ನ ರೂಮ್​​ನಲ್ಲಿ ನೇಣಿಗೆ ಶರಣಾಗಿರುವ ಮೃತ ಶ್ರೇಯಸ್ ಮೂಲತಃ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದವರು ಎಂಬ ಮಾಹಿತಿ ಇದೆ.

ವಿದ್ಯಾರ್ಥಿ ಶ್ರೇಯಸ್

ಶ್ರೇಯಸ್ ಬೈಪೋಲಾರ್ ಡಿಸಾರ್ಡರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಅದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದನಂತೆ. ಅಲ್ಲದೇ ಮನೆಯವರು ಒತ್ತಾಯಕ್ಕೆ ಒಲ್ಲದ ಮನಸ್ಸಿನಿಂದ ಎಂಬಿಬಿಎಸ್ ಮಾಡಿದ್ದನಂತೆ. ಇದೇ ಖಿನ್ನತೆಯಿಂದ ಶ್ರೇಯಸ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಶ್ರೇಯಸ್ ಆತ್ಮಹತ್ಯೆಗೆ ಶರಣಾಗುವ ಮುನ್ನ ತನ್ನ ಅಕ್ಕ ಶ್ರದ್ದಾಗೆ ಕರೆ ಮಾಡಿರುವುದಾಗಿ ಗೊತ್ತಾಗಿದೆ. ಹಾಸ್ಟೆಲ್​ನ ವಿದ್ಯಾರ್ಥಿ ಹಾಗೂ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿದರು.

ABOUT THE AUTHOR

...view details