ಬಳ್ಳಾರಿ:ವಿದ್ಯಾರ್ಥಿ ವೇತನ ನೀಡುವಂತೆ ಒತ್ತಾಯಿಸಿ ಎಸ್ಸಿ ಮತ್ತು ಎಸ್ಟಿ ಮ್ಯಾನೇಜ್ಮೆಂಟ್ ಕೋಟಾದಡಿ ಆಯ್ಕೆಯಾದ ಎಂಬಿಎ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ರು.
ವಿದ್ಯಾರ್ಥಿ ವೇತನಕ್ಕಾಗಿ ಮನವಿ ನಗರದ ಮುನ್ಸಿಪಲ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ಇವರ ನೇತೃತ್ವದಲ್ಲಿ ಆರ್.ವೈ.ಎಂ.ಸಿ ಕಾಲೇಜ್ ಮತ್ತು ಬಿ.ಐ.ಟಿ.ಎಂ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.
ಈ ವೇಳೆ ಈಟಿವಿ ಭಾರತದೊಂದಿಗೆ ಎಂಬಿಎ ವಿದ್ಯಾರ್ಥಿನಿ ಶೋಭಾ ಮಾತನಾಡಿ, ಬಿ.ಐ.ಟಿ.ಎಂ ಕಾಲೇಜ್ಗೆ ಸೇರಿದಾಗ ಸರ್ಕಾರದ ಕಡೆಯಿಂದ ಮ್ಯಾನೇಜ್ಮೆಂಟ್ ಕೋಟಾದಡಿಯಲ್ಲಿ ಆಯ್ಕೆಯಾದ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡುತ್ತಾರೆ ಎಂದು ತಿಳಿಸಿದರು. ಆದರೆ ಸರ್ಕಾರ 2018 - 2019ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನ ನೀಡಿಲ್ಲ, ಹಾಗೆಯೇ 2019 - 2020 ನೇ ಸಾಲಿನಲ್ಲಿ ಸಹ ವಿದ್ಯಾರ್ಥಿ ವೇತನ ಬಂದಿಲ್ಲ ಎಂದು ದೂರಿದರು. ನಾನು ರೈತನ ಮಗಳಾಗಿದ್ದು, ನನ್ನ ಪೋಷಕರು 60 ಸಾವಿರ ಹಣವನ್ನು ಬಡ್ಡಿ ರೂಪದಲ್ಲಿ ಸಾಲ ತಂದು ಕಾಲೇಜಿಗೆ ಕಟ್ಟಿದ್ದಾರೆ. ಈ ವರ್ಷ ಕೊರೊನಾ ಬಿಕ್ಕಟ್ಟಿನಿಂದ ಯಾವುದೇ ಆದಾಯವಿಲ್ಲ. ಈ ಮಧ್ಯೆ ಕಾಲೇಜ್ನವರು ಫೀಜ್ ಕಟ್ಟಿ ಎಂದು ಪ್ರತಿನಿತ್ಯ ಫೋನ್ ಮಾಡ್ತಾ ಇದ್ದಾರೆ. ಪೋಷಕರು ಹಣವಿಲ್ಲದೇ ಓದು ನಿಲ್ಲಿಸಿಬಿಡಿ ಎನ್ನುತ್ತಿದ್ದಾರೆ ಎಂದು ವಿದ್ಯಾರ್ಥಿನಿ ಶೋಭಾ ಅಳಲು ತೋಡಿಕೊಂಡ್ರು. ಹೀಗಾಗಿ ಸರ್ಕಾರ ವಿದ್ಯಾರ್ಥಿ ವೇತನ ನೀಡಿದ್ರೆ ನಾವು ಓದು ಮುಂದುವರಿಸಲು ಅನುಕೂಲವಾಗುತ್ತೆ ಎಂದು ಮನವಿ ಮಾಡಿಕೊಂಡ್ರು.
ವಿದ್ಯಾರ್ಥಿ ವೇತನಕ್ಕಾಗಿ ಮನವಿ ಬಳ್ಳಾರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಕಾರ್ಯದರ್ಶಿ ಹರ್ಷ ನಾಯ್ಕ್ ಮಾತನಾಡಿ, ಆರ್.ವೈ.ಎಂ.ಸಿ ಕಾಲೇಜ್ ಮತ್ತು ಬಿ.ಐ.ಟಿ.ಎಂ ಕಾಲೇಜ್ನಲ್ಲಿ ಮ್ಯಾನೇಜ್ಮೆಂಟ್ ಕೋಟಾದಡಿ ಎಂಜಿನಿಯರಿಂಗ್ ಮತ್ತು ಎಂಬಿಎ ವಿದ್ಯಾಭ್ಯಾಸ ಮಾಡುತ್ತಿರುವ ಎಸ್ಸಿ ಮತ್ತು ಎಸ್ಟಿ ವರ್ಗಕ್ಕೆ ಸೇರಿದ 500 ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಕೂಡಲೇ ಸರ್ಕಾರ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು ಇಲ್ಲದಿದ್ರೆ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದ್ರು.