ಕರ್ನಾಟಕ

karnataka

By

Published : Apr 22, 2022, 9:56 AM IST

ETV Bharat / state

ಸಾರ್ವಜನಿಕ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಅವಧಿ ಮೀರಿದ ಔಷಧಿಗಳು ಪತ್ತೆ!

ಈ ಮಾತ್ರೆಗಳು ಸಮುದಾಯದತ್ತ ಶಾಲೆಗಳಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಈಗಲಾದರೂ ಎಚ್ಚೆತ್ತುಕೊಂಡು ಆರೋಗ್ಯ ಇಲಾಖೆ ಅಧಿಕಾರಿಗಳು ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕೂಲಂಕಷ ತನಖೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ..

massive-outdated-drug-detection-in-public-space
ಸಾರ್ವಜನಿಕ ಸ್ಥಳದಲ್ಲಿ ಅವಧಿ ಮೀರಿದ ಔಷಧಿ ಪತ್ತೆ

ವಿಜಯನಗರ :ಹೊಸಪೇಟೆ ನಗರದ ಸಂಡೂರು ರಸ್ತೆಯ ಲಿಟ್ಲ್ ಫ್ಲವರ್ ಕಾಲೇಜ್ ಬಳಿ ಅವಧಿ ಮೀರಿದ (ಎಕ್ಸ್ಪೈರಿ) ಸರ್ಕಾರಿ ಔಷಧಿಗಳು ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಗರ್ಭಿಣಿ, ಬಾಣಂತಿಯರು ಹಾಗೂ ಅಪೌಷ್ಟಿಕತೆಯಿಂದ ಬಳಲುವವರಿಗೆ ನೀಡುವ ಕಬ್ಬಿಣಾಂಶದ ಮಾತ್ರೆಗಳನ್ನು, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡುವ ಮಾತ್ರೆಗಳನ್ನು ಇಲ್ಲಿ ಎಸೆಯಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಅವಧಿ ಮೀರಿದ ಔಷಧಿಗಳು ಪತ್ತೆ..

ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಹೊರಗಡೆಯಿಂದ ಔಷಧಿ ಖರೀದಿಸುವಂತೆ ಚೀಟಿ ಬರೆದುಕೊಡಲಾಗುತ್ತಿದೆ. ಈ ಮಧ್ಯೆ ಅವಧಿ ಮೀರಿದ ಮಾತ್ರೆಗಳನ್ನು ಬಿಸಾಡಲಾಗಿದೆ. ಜನರಿಗೆ ಹಂಚದೇ, ಸರ್ಕಾರಿ ವೈದ್ಯರು ಈ ರೀತಿ ಬಿಸಾಡಿದ್ದಾರೆ. ಇದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಭಾರಿ ಪ್ರಮಾಣದ ಔಷಧಿಗಳನ್ನು ಎಸೆಯಲಾಗಿದೆ.

ಸ್ಥಳಕ್ಕೆ ಈವರೆಗೂ ಯಾವೊಬ್ಬ ಆರೋಗ್ಯ ಇಲಾಖೆಯ ಅಧಿಕಾರಿಗಳೂ ಭೇಟಿ ನೀಡಿ ಪರಿಶಿಲನೆ ನಡೆಸಿಲ್ಲ. ವಿಜಯನಗರ ಜಿಲ್ಲಾಡಳಿತ ಈ ಕೂಡಲೇ ಇಂಥ ಕೆಲಸ ಮಾಡಿದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕ್ರಮವಹಿಸಬೇಕು. ಈ ಬಗ್ಗೆ ತನಿಖಾ ತಂಡ ರಚನೆ ಮಾಡಿ ಸೂಕ್ತ ಕ್ರಮವಹಿಸಬೇಕು. ಸರ್ಕಾರಿ ವೈದ್ಯರು ಅವಧಿ ಮೀರಿದ ಔಷಧಿಗಳನ್ನು ನಿಯಮಾನುಸಾರ ವಿಲೇ ಮಾಡಬೇಕು. ಆದರೆ, ಸಾರ್ವಜನಿಕ ಸ್ಥಳದಲ್ಲಿ ಎಸೆದಿರುವುದು ಸರಿಯಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಾತ್ರೆಗಳು ಸಮುದಾಯದತ್ತ ಶಾಲೆಗಳಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಈಗಲಾದರೂ ಎಚ್ಚೆತ್ತುಕೊಂಡು ಆರೋಗ್ಯ ಇಲಾಖೆ ಅಧಿಕಾರಿಗಳು ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕೂಲಂಕಷ ತನಖೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಕೆಮ್ಮಿನ ಸಿರಪ್​​ ಬದಲಿಗೆ ಹೇನಿನ ಔಷಧಿ ನೀಡಿದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ

ABOUT THE AUTHOR

...view details