ಕರ್ನಾಟಕ

karnataka

ETV Bharat / state

ಹೃದಯಾಘಾತದಿಂದ ಮರಿಮಹಾಂತ ಮಹಾಸ್ವಾಮೀಜಿ ವಿಧಿವಶ - ಮಹಾಸ್ವಾಮೀಜಿ ಹೃದಯಾಘಾತದಿಂದ ನಿಧನ

ಹೊಸಪೇಟೆ ತಾಲೂಕಿನ ಗರಗನಾಗಲಾಪುರ ಗ್ರಾಮದ ಶ್ರೀಗುರು ಒಪ್ಪತ್ತೇಶ್ವರ ಮಠದ ಪೀಠಾಧಿಪತಿ ಮರಿಮಹಾಂತ ಮಹಾ ಸ್ವಾಮೀಜಿ(76) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಸಂಜೆ ಅವರ ಅಂತ್ಯಕ್ರಿಯೆ ನಡೆಯಲಿದೆ.

ಮರಿಮಹಾಂತ ಮಹಾಸ್ವಾಮೀಜಿ ಹೃದಯಾಘಾತದಿಂದ ನಿಧನ
Marimahanta Mahaswamiji died by heart attack in Hospet

By

Published : Feb 28, 2021, 12:29 PM IST

ಹೊಸಪೇಟೆ(ವಿಜಯನಗರ):ತಾಲೂಕಿನ ಗರಗ ನಾಗಲಾಪುರ ಗ್ರಾಮದ ಶ್ರೀಗುರು ಒಪ್ಪತ್ತೇಶ್ವರ ಮಠದ ಪೀಠಾಧಿಪತಿ ಮರಿಮಹಾಂತ ಮಹಾ ಸ್ವಾಮೀಜಿ(76) ಹೃದಯಾಘಾತದಿಂದ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸ್ವಾಮೀಜಿ‌ ನಿಧನಕ್ಕೆ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಡಾ.ಸಂಗನಬಸವ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ಸಂಜೆ 5 ಗಂಟೆಗೆ ಮಠದಲ್ಲಿ ಸ್ವಾಮೀಜಿಯವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details