ಬಳ್ಳಾರಿ: ಕೃಷಿ ಕಾರ್ಮಿಕ ಕರೆದೊಯುತ್ತಿದ್ದ ಆಟೋ HLC ಕಾಲುವಗೆ ಪಲ್ಟಿಯಾಗಿರುವ ಇಂದು ಬೆಳಗ್ಗೆ ನಡೆದಿದೆ. ಸಂಭವಿಸಿದ ದುರಂತದಲ್ಲಿ ಐದು ಜನ ಕಾರ್ಮಿಕರ ರಕ್ಷಣೆ ಮಾಡಲಾಗಿದ್ದು, 3 ಕಾರ್ಮಿಕರ ಮೃತ ದೇಹ ಪತ್ತೆಯಾಗಿದೆ. ಆದ್ರೆ ಮೂವರ ಕಾರ್ಮಿಕರು ಕಾಲುವೆಯಲ್ಲಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಈ ಘಟನೆ ಬಳ್ಳಾರಿ ತಾಲೂಕಿನ ಕೊಳಗಲ್ ಸಮೀಪದಲ್ಲಿ ನಡದಿದೆ.
ಇಂದು ಕೊಳಗಲ್ ಗ್ರಾಮದಿಂದ ಕೃಷ್ಣಾನಗರಕ್ಕೆ ಆಟೋದಲ್ಲಿ ಕೃಷಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ಕಾಲುವೆಗೆ ಉರುಳಿ ಬಿದ್ದಿದೆ. ಆಟೋದ ಮುಂದಿನ ಚಕ್ರ ಕಲ್ಲಿನ ಮೇಲೆ ಹತ್ತಿದ್ದೇ ಘಟನೆ ಕಾರಣವಾಗಿದೆ ಎನ್ನಲಾಗಿದೆ.
HLC ಕಾಲುವೆಗೆ ಉರುಳಿ ಬಿದ್ದ ಆಟೋ ಆಟೋ ಕೆನಾಲ್ಗೆ ಉರುಳಿ ಬಿಳುತ್ತಿರುವ ಸಂದರ್ಭದಲ್ಲಿ ಡ್ರೈವರ್ ಭೀಮಾ ಮತ್ತು ಬಾಲಕ ಮಹೇಶ ಹೊರಗಡೆ ಜಿಗಿದ್ದಿದ್ದಾರೆ. ಆಟೋ ಕಾಲುವೆಯಲ್ಲಿ ಬಿದ್ದಾಗ ಪ್ರಯಾಣಿಕರು ಕೂಗಿಕೊಂಡಿದ್ದಾರೆ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಣ್ಣ ದೊಡ್ಡಪ್ಪ ಅವರು ರಕ್ಷಣೆಗೆ ಹೋಗಿದ್ದು, ನೀರಿನಲ್ಲಿ ಒದ್ದಾಡುತ್ತಿದ್ದ ನಾಲ್ವರನ್ನು ರಕ್ಕಿಸಿದ್ದರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡರು.
HLC ಕಾಲುವೆಗೆ ಉರುಳಿ ಬಿದ್ದ ಆಟೋ ದಮ್ಮೂರು ಎರ್ರೆಮ್ಮ, ಹೇಮಾವತಿ, ಶಿಲ್ಪ ಮತ್ತು ಪುಷ್ಪವತಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ದುರ್ಗಮ್ಮ, ನಿಂಗಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಮೃತದೇಹಗಳು ಪತ್ತೆಯಾಗಿವೆ. ಇನ್ನು ಪುಷ್ಪವತಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕುಡತಿನಿ ಲಕ್ಷ್ಮಿ, ಹುಲಿಗೆಮ್ಮ, ನಾಗರತ್ನಮ್ಮ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
HLC ಕಾಲುವೆಗೆ ಉರುಳಿ ಬಿದ್ದ ಆಟೋ ಸ್ಥಳಕ್ಕೆ ಎಡಿಸಿ ಮಂಜುನಾಥ್, ಎಸಿ ಡಾ.ಆಕಾಶ ಶಂಕರ್, ಎಸ್ಪಿ ಸೈದುಲ್ಲಾ ಅಡಾವತ್, ಡಿವೈಎಸ್ಪಿ ಶೇಖರಪ್ಪ, ಸತ್ಯನಾರಾಯಣ ರಾವ್, ಇನ್ಸ್ ಪೆಕ್ಟರ್ ನಿರಂಜನ್, ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಫಯರ್ ಬ್ರಿಗೇಡ್ ಅವರ ಬೋಟಿನ ಮೂಲಕ ಮೃತ ದೇಹಗಳ ಶೋಧ ಕಾರ್ಯ ನಡೆದಿದೆ.
ನಾನು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಕೂಗಿಕೊಂಡರು, ನೀರು ಕುಡಿಯಲು ಹೋಗಿ ಬಿದ್ದಿರಬಹುದೆಂದು ತಿಳಿದು ಕೆನಾಲ್ಗೆ ಹೋಗಿ ನೋಡಿದೆ. ಅಲ್ಲಿ ನಾಲ್ವರು ಬಿದ್ದು ತೇಲಾಡುತ್ತಿದ್ದರು. ಕೂಡಲೇ ನೀರಿಗೆ ಜಿಗಿದು ಮಹಿಳೆ ಸೀರೆಯಿಂದ ನಾಲ್ವರನ್ನು ರಕ್ಷಿಸಲಾಯಿತು ಎಂದು ಸಣ್ಣ ದೊಡ್ಡಪ್ಪ ಘಟನೆ ಬಗ್ಗೆ ಮಾಹಿತಿ ನೀಡಿದರು.
ಓದಿ:ರಾಯಚೂರು ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ.. ತಂದೆ ಮಗ ಸ್ಥಳದಲ್ಲೇ ಸಾವು