ಬಳ್ಳಾರಿ: ನಾಳೆ ನಡೆಯಲಿರುವ ಮಣ್ಣೆತ್ತಿನ ಅಮವಾಸ್ಯೆ ನಿಮಿತ್ತ ಮಣ್ಣಿನಿಂದ ತಯಾರಿಸಿದ ಜೋಡೆತ್ತು - ಗೋದಲಿಗಳ ಖರೀದಿ ಅಷ್ಟಕ್ಕಷ್ಟೇ ಎಂಬಂತಾಗಿದೆ. ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಮಣ್ಣೆತ್ತಿನ ಅಮವಾಸ್ಯೆಯನ್ನ ಅತ್ಯಂತ ಸಂಭ್ರಮದಿಂದ ಆಚರಿಸುವ ಬದಲಿಗೆ ಸರಳವಾಗಿ ಆಚರಿಸಲು ಗಣಿನಾಡಿನ ಜನರು ನಿರ್ಧರಿಸಿದ್ದಾರೆ.
ನಾಳೆ ಮಣ್ಣೆತ್ತಿನ ಅಮಾವಾಸ್ಯೆ: ಬಳ್ಳಾರಿಯಲ್ಲಿ ಕಳೆಗುಂದಿದ ಮಣ್ಣೆತ್ತುಗಳ ಖರೀದಿ ಮಣ್ಣೆತ್ತುಗಳ ಖರೀದಿಯ ಭರಾಟೆ ಹೆಚ್ಚಾಗಿ ಕಂಡು ಬರುತ್ತಿಲ್ಲ. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಈ ಅಮವಾಸ್ಯೆ ಸಂಭ್ರಮ ಜೋರು ಇರುತ್ತೆ. ಪಕ್ಕಾ ಗ್ರಾಮೀಣ ಸೊಗಡಿನ ಹಬ್ಬ ಇದಾಗಿದೆ. ವಿಶೇಷವಾಗಿ ರೈತಾಪಿ ವರ್ಗದವರು ಈ ಅಮವಾಸ್ಯೆಯನ್ನ ಅತ್ಯಂತ ಸಂಭ್ರಮದಿಂದ ಆಚರಿಸುವುದು ವಾಡಿಕೆ. ಈ ಕೊರೊನಾ ಸೋಂಕಿನಿಂದಾಗಿ ಈ ಅಮವಾಸ್ಯೆ ಸಂಭ್ರಮ ಕಳೆಗುಂದಿದೆ.
ಮಾರುಕಟ್ಟೆಯಲ್ಲಿ ಜೋಡಿ ಮಣ್ಣೆತ್ತುಗಳ ಕಲರವ ಇದ್ದರೂ ಕೂಡ ಖರೀದಿ ಮಾತ್ರ ಮಂದಗತಿಯಲ್ಲಿ ಸಾಗಿದೆ ಎನ್ನಲಾಗಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ಈ ಜೋಡಿ ಮಣ್ಣೆತ್ತುಗಳನ್ನಿಟ್ಟುಕೊಂಡು ವಿಶೇಷ ಪೂಜೆ ಮಾಡುತ್ತಾರೆ. ಮಹಾನಗರ, ಪಟ್ಟಣ ಹಾಗೂ ಹೋಬಳಿ ಪ್ರದೇಶಗಳಲ್ಲೂ ಮಣ್ಣೆತ್ತಿನ ಅಮವಾಸ್ಯೆ ಆಚರಿಸಲಾಗುತ್ತೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳ್, ಭಾರತೀಯ ಸಂಪ್ರದಾಯದಲ್ಲೊಂದಾದ ಮಣ್ಣೆತ್ತಿನ ಅಮವಾಸ್ಯೆಯನ್ನ ಈ ಭಾಗದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತೆ. ಇಂದಿನ ಯುವ ಪೀಳಿಗೆಗೆ ಇಂತಹ ಭಾರತೀಯ ಸಂಪ್ರದಾಯದ ಹಬ್ಬ- ಹರಿದಿನಗಳು ಪರಿಚಯಿಸುವುದು ಇದರ ಉದ್ದೇಶವಾಗಿದೆ ಎನ್ನುತ್ತಾರೆ.