ಬಳ್ಳಾರಿ: ಬಳ್ಳಾರಿ ವಲಯದ ನೂತನ ಐಜಿಪಿಯಾಗಿ ಮನೀಶ್ ಖರ್ಬಿಕರ್ ಅವರನ್ನ ನಿಯೋಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಾಲಿ ಐಜಿಪಿ ಮನೀಶ್ ಅವರು ಕಲಬುರಗಿ ವಲಯದ ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಬಳ್ಳಾರಿ ವಲಯದ ಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ನಂಜುಂಡ ಸ್ವಾಮಿ ಅವರನ್ನ ಬೆಂಗಳೂರು ಕಾರಾಗೃಹದ ಐಜಿಪಿಯಾಗಿ ವರ್ಗಾವಣೆಗೊಳಿಸಿದೆ.