ಕರ್ನಾಟಕ

karnataka

ETV Bharat / state

ಕಬ್ಬು ಕಟಾವು ಮಾಡಲು ಹೋಗಿದ್ದ ಬಾಲಕಿ ಕುತ್ತಿಗೆಯನ್ನೇ ಕಟ್ ಮಾಡಿದ ಪಾಪಿ​: ನಲುಗಿದ ಸಂತ್ರಸ್ತೆ ಕುಟುಂಬ ! - Girl killed in mandya

ಪರಿಚಯಸ್ಥನೇ‌ ಕತ್ತು ಕುಯ್ದು ಬರ್ಬರ ಹತ್ಯೆ ಮಾಡಿರುವುದು ಕುಟುಂಬಸ್ಥರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಣ್ಣ ಮುಂದೆ ಓಡಾಡುತ್ತಿದ್ದ ಮಗಳು ಹೆಣವಾಗಿ ಮಲಗಿರುವುದು ಹಾಗೂ ಹೆತ್ತಕರಳು ಎದೆ ಹೊಡೆದುಕೊಂಡು ದುಃಖ ವ್ಯಕ್ತಪಡಿಸುವ ಪರಿ ನೋಡಗರ ಕಣ್ಣನ್ನು ಒದ್ದೆ ಮಾಡಿತು.

Mandya murder case : distress in  Family of victims
ಕಬ್ಬು ಕಟಾವು ಮಾಡಲು ಹೋದ ಬಾಲಕಿಯ ಕುತ್ತಿಗೆಯೇ ಕಟ್

By

Published : Dec 4, 2020, 5:54 PM IST

Updated : Dec 4, 2020, 7:36 PM IST

ಹೊಸಪೇಟೆ: ಹೊಸಪೇಟೆ ತಾಲೂಕಿನ ತಾಳೆ ಬಸಾಪುರ ತಾಂಡಾದಲ್ಲಿ ಸ್ಮಶಾನ ಮೌನ ಆವರಿಸಿದೆ. ಮಂಡ್ಯದಲ್ಲಿ ಬಾಲಕಿ ಅತ್ಯಾಚಾರ ಮಾಡಿ, ಕತ್ತುಕುಯ್ದು ಕೊಲೆ ಮಾಡಿರುವ ಘಟನೆಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಕಣ್ಣ ಮುಂದೆ ಓಡಾಡಿಕೊಂಡಿದ್ದ ಮಗಳು ಹೆಣವಾಗಿ ಮಲಗಿರುವುದು, ಹೆತ್ತಕರಳು ಎದೆ ಹೊಡೆದುಕೊಂಡು ದುಃಖ ವ್ಯಕ್ತಪಡಿಸುವ ಪರಿ ನೋಡಗರ ಕಣ್ಣನ್ನು ಒದ್ದೆ ಮಾಡುವಂತಿದೆ. ತಾಂಡಾವೊಂದರ ಮಹಿಳೆಗೆ ಮೂರು‌ ಮಕ್ಕಳು.‌ ಅದರಲ್ಲಿ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಗಂಡು ಮಗ ಇದ್ದಾನೆ.‌ ಇಬ್ಬರೂ ಇನ್ನು ಚಿಕ್ಕವರಿದ್ದಾರೆ. ಅದರಲ್ಲಿ ಕೊಲೆಗೀಡಾದ ಈ ಬಾಲಕಿ ದೊಡ್ಡ ಮಗಳಾಗಿದ್ದಾಳೆ.

12 ವರ್ಷದ ಮಗಳು ಬರ್ಬರ ಹತ್ಯೆಯಾಗಿರುವುದು ತಾಯಿಗೆ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಕಳೆದ ಎರಡು ವರ್ಷದಿಂದ ಈ ಮಹಿಳೆ ಕುಟುಂಬಸ್ಥರು ಕಬ್ಬು ಕಟಾವು ಮಾಡಲು ಮಂಡ್ಯ ಜಿಲ್ಲೆಯ ಹುರುಗಲವಾಡಿ ಗ್ರಾಮಕ್ಕೆ ತೆರಳುತ್ತಿದ್ದರು. ಮೊದಲನೇ ವರ್ಷದಲ್ಲಿ ಕಬ್ಬು ಕಟಾವು ಮಾಡಿ ಊರಿಗೆ ತೆರಳಿದ್ದಾರೆ. ಆದರೆ, ಎರಡನೆಯ ವರ್ಷದಲ್ಲಿ ಈ ದುರ್ಘಟನೆ ನಡೆದಿರುವುದು ಕುಟುಂಬಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕಬ್ಬು ಕಟಾವು ಮಾಡಲು ಹೋಗಿದ್ದ ಬಾಲಕಿ ಕುತ್ತಿಗೆಯನ್ನೇ ಕಟ್ ಮಾಡಿದ ಪಾಪಿ

ಅಂದು ನಡೆದಿದ್ದು ಏನು?

ಕೃತ ಎಸೆಗಿದ ಯುವಕನ ಜಮೀನಿನ ಪಕ್ಕದಲ್ಲೇ ಈ ಕಾರ್ಮಿಕರು ಟೆಂಟ್ ಹಾಕಿಕೊಂಡಿದ್ದರು. ಹಾಗೆಯೇ ಬಾಲಕಿ ಸೋದರತ್ತೆ ಜೊತೆಗೇ ಇದ್ದರು. ಆದರೆ, ಬಾಲಕಿಯ ತಾಯಿ ಮತ್ತೊಂದು ಊರಿಗೆ ಕಬ್ಬು ಕಟಾವು ಮಾಡಲು ಹೋಗಿದ್ದಾಳೆ. ಡಿ.2 ರಂದು ಬೆಳಗ್ಗೆ 11.10 ಕ್ಕೆ ಬಾಲಕಿ ಮನೆಯಲ್ಲಿ ತಿಂಡಿ ಮಾಡಿಕೊಂಡು ಕಬ್ಬು ಕಟಾವು ಮಾಡಲು ತೆರಳುತ್ತಾಳೆ. ಆ ಸಂದರ್ಭದಲ್ಲಿ ಯುವಕ ಬಾಲಕಿಯನ್ನು ಹಿಂಬಾಲಿಸಿ ಹೋಗುತ್ತಾನೆ. ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಬಾಲಕಿಯನ್ನು ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗುತ್ತಾನೆ. ಇದರಿಂದ ಹೆದರಿದ ಬಾಲಕಿ ಚೀರುತ್ತಾಳೆ.

ಎಲ್ಲೋ ‌ಕಾಡು ಪ್ರಾಣಿ ಬಾಲಕಿ ಮೇಲೆ ದಾಳಿ ಮಾಡಿದೆ ಎಂದು ಹೊಲದಲ್ಲಿದ್ದ ಸೋದರತ್ತೆ ಆತಂಕಗೊಳ್ಳುತ್ತಾಳೆ. ನಂತರ ಹುಡುಕಾಟ ಆರಂಭ ಮಾಡುತ್ತಾಳೆ ಆದರೆ, ಎಲ್ಲಿ ಇದ್ದಾಳೆ ಎಂಬುದು ತಿಳಿಯುವುದಿಲ್ಲ.‌ ಕೆಲ ಸಮಯದ ಬಳಿಕ ಕತ್ತು ಕುಯ್ದ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗುತ್ತಾಳೆ. ಎರಡು ವರ್ಷಗಳ ಹಿಂದೆ ಬಾಲಕಿ ತಂದೆ ಮೃತಪಟ್ಟಿದ್ದು, ತಾಯಿಯೇ ಎಲ್ಲಾ ಜವಾಬ್ದಾರಿಯನ್ನು ತಗೆದುಕೊಂಡು ಮನೆ ನಡೆಸಿಕೊಂಡು ಹೋಗುತ್ತಿದ್ದರು.‌ ಈಗ ಈ ಕುಟುಂಬ ಅಕ್ಷರಶಃ ನಲುಗಿ ಹೋಗಿದೆ.

Last Updated : Dec 4, 2020, 7:36 PM IST

ABOUT THE AUTHOR

...view details