ಕರ್ನಾಟಕ

karnataka

ETV Bharat / state

ಮಾಸ್ಕ್ ಹಾಕು ಪೊಲೀಸ್‌ ಕಾನ್ಸ್‌ಟೇಬಲ್‌ಗೆ ಕಪಾಳಮೋಕ್ಷ.. ಆರೋಪಿಗೆ ನ್ಯಾಯಾಂಗ ಬಂಧನ - ಹೊಸಪೇಟೆಯಲ್ಲಿ ಪೊಲೀಸ್​ಗೆ ಕಪಾಳ ಮೋಕ್ಷ

ಆರೋಪಿ ವಿರುದ್ಧ ಪೊಲೀಸ್ ಸಿಬ್ಬಂದಿ ನೀಡಿದ ದೂರಿನಂತೆ ಕೂಡ್ಲಿಗಿ ಪಿಎಸ್‍ಐ ಸುರೇಶ್ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ..

Man slaps Police for questioning about Mask
ಪೊಲೀಸ್ ಸಿಬ್ಬಂದಿಗೆ ಕಪಾಳ ಮೋಕ್ಷ

By

Published : Apr 26, 2021, 12:45 PM IST

ಹೊಸಪೇಟೆ :ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಮಾಸ್ಕ್​ ಹಾಕದೆ ಪ್ರಯಾಣಿಸುತ್ತಿದ್ದಾಗ ಇದನ್ನ ಪ್ರಶ್ನಿಸಿದ ಪೊಲೀಸ್ ಕಾನ್ಸ್‌ಟೇಬಲ್‌ಗೆ ವ್ಯಕ್ತಿಯೋರ್ವ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ.

ಮರಿಯಮ್ಮನಹಳ್ಳಿಯ ಪ್ರೇಮ್ ಕುಮಾರ್ (30) ಎಂಬಾತ ಪೊಲೀಸ್‌ಗೆ ಕಪಾಳ ಮೋಕ್ಷ ಮಾಡಿ ಆರೋಪಿ. ಈಗಾಗಲೇ ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ.

ಓದಿ : ಆಸ್ಪತ್ರೆಯಲ್ಲೇ ಯದ್ವಾತದ್ವಾ ಹೊಡೆದಾಡಿಕೊಂಡ ಎರಡು ಗುಂಪು.. ವಿಡಿಯೋ

ಮಾಸ್ಕ್​ ಧರಿಸದೆ ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದ ಪ್ರೇಮ್​ ಕುಮಾರ್‌ನನ್ನು ನಿಲ್ಲಿಸಿ, ಮಾಸ್ಕ್ ಹಾಕದೆ ಯಾಕೆ ಓಡಾಡ್ತಿದ್ದೀಯ ಎಂದು ಕರ್ತವ್ಯದಲ್ಲಿದ್ದ ಪೊಲೀಸರು ಪ್ರಶ್ನಿಸಿದ್ದರು.

ಇದರಿಂದ ಕುಪಿತಗೊಂಡ ಪ್ರೇಮ ಕುಮಾರ್, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳ ಮೋಕ್ಷ ಮಾಡಿದ್ದಾನೆ ಎನ್ನಲಾಗಿದೆ.

ಆರೋಪಿ ವಿರುದ್ಧ ಪೊಲೀಸ್ ಸಿಬ್ಬಂದಿ ನೀಡಿದ ದೂರಿನಂತೆ ಕೂಡ್ಲಿಗಿ ಪಿಎಸ್‍ಐ ಸುರೇಶ್ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

ABOUT THE AUTHOR

...view details