ಹೊಸಪೇಟೆ (ವಿಜಯನಗರ):ನಗರದಟಿಬಿ ಡ್ಯಾಂ ರಾಷ್ಟ್ರೀಯ ಹೆದ್ದಾರಿ 50ರ ಕೆಳಗಡೆ ವ್ಯಕ್ತಿವೋರ್ವನ ಕೊಲೆಯಾಗಿದೆ.
ಕೊಲೆಗೀಡಾದ ವ್ಯಕ್ತಿಯನ್ನು ಕೇಬಲ ಅಪರೇಟರ್ ಜಾನ್ ಮೈಕಲ್ (40) ಎಂದು ಗುರುತಿಸಲಾಗಿದೆ. ಜಾನ್ ಅವರ ಕೈಕಟ್ಟಿ, ಕಲ್ಲಿನಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ. ಮೀನುಗಾರರು ಬೆಳಗ್ಗೆ ಫ್ಲೈ ಓವರ್ ಮಾರ್ಗವಾಗಿ ಹೋಗುತ್ತಿದ್ದಾಗ ಕೊಲೆ ಮಾಡಿರುವ ಬಗ್ಗೆ ತಿಳಿದುಬಂದಿದ್ದು, ಜಾನ್ ಬಳಸುತ್ತಿದ್ದ ಸ್ಕೂಟಿ ಸ್ಥಳದಲ್ಲಿ ಪತ್ತೆಯಾಗಿದೆ.